ಉಳಿದಂತೆ, ಗ್ರಂಥಾಲಯ ಸಮಿತಿಗೆ ಯು.ಬಿ. ಬಣಕಾರ್, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳ ಸಮಿತಿಗೆ ರಿಜ್ವಾನ್ ಅರ್ಷದ್, ಅಂದಾಜುಗಳ ಸಮಿತಿಗೆ ಹಂಪನಗೌಡ ಬಾದರ್ಲಿ, ಸರ್ಕಾರಿ ಭರವಸೆಗಳ ಸಮಿತಿಗೆ ಕೆ.ವೈ.ನಂಜೇಗೌಡ, ಹಕ್ಕುಬಾಧ್ಯತೆಗಳ ಸಮಿತಿಗೆ ಶಿವಾನಂದ ಮಹಾಂತೇಶ ಕೌಜಲಗಿ, ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿ, ಅರ್ಜಿಗಳ ಸಮಿತಿ ಹಾಗೂ ವಸತಿ ಸೌಕರ್ಯಗಳ ಸಮಿತಿಗೆ ರುದ್ರಪ್ಪ ಲಮಾಣಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.