ಬೆಳಗಾವಿ: ‘ರೈಲ್ವೆಯೂ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ಆದರೆ, ರಾಜ್ಯ ಸರ್ಕಾರ ನಿಗದಿತ ಭೂಮಿ ಸ್ವಾಧೀನ ಮಾಡಿ ಕೊಡುವಲ್ಲಿ ಹಿಂದೇಟು ಹಾಕುತ್ತಿದೆ. ಇದರಿಂದ ಯೋಜನೆಗಳು ಕುಂಟುತ್ತ ಸಾಗಿವೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ರಾಜ ಆಗಿದ್ದಾರೆ’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಆರೋಪಿಸಿದರು.

‘ಬೆಳಗಾವಿ– ಕಿತ್ತೂರು– ಧಾರವಾಡ ರೈಲು ಮಾರ್ಗ, ಶಿವಮೊಗ್ಗ– ರಾಣೆಬೆನ್ನೂರ, ಗದಗ– ವಾಡಿ, ಶಿವಮೊಗ್ಗ– ಹರಿಹರ, ವೈಟ್ಫೀಲ್ಡ್– ಕೋಲಾರ, ಹಾಸನ– ಬೇಲೂರು, ತುಮಕೂರು– ದಾವಣಗೆರೆ, ಹುಬ್ಬಳ್ಳಿ– ಅಂಕೋಲಾ ಮಾರ್ಗ, ರಾಮದುರ್ಗ– ಲೋಕಾಪುರ ಮಾರ್ಗ ಹೀಗೆ ಹಲವು ಯೋಜನೆಗಳಿಗೆ ಕೇಂದ್ರ ಮಂಜೂರಾತಿ ನೀಡಿದೆ. ಆದರೆ, ಬೇಕಾದ ಭೂಮಿ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎನ್ನುವುದನ್ನು ಸಿದ್ದರಾಮಯ್ಯ ಮರೆತಿದ್ದಾರೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಸಿದ್ದರಾಮಯ್ಯ ತಮ್ಮ ತಪ್ಪನ್ನು ಒಮ್ಮೆಯಾದರೂ ಒಪ್ಪಿಕೊಂಡಿದ್ದಾರಾ? ಯಾವಾಗಲೂ ಕೇಂದ್ರದ್ದೇ ತಪ್ಪು ಎನ್ನುತ್ತಾರೆ. ಅರುಣಾಚಲಪ್ರದೇಶ, ಛತ್ತೀರಗಡ, ತ್ರಿಪುರಾ, ಜಾರ್ಖಂಡ್ ಮುಂತಾದ ರಾಜ್ಯಗಳನ್ನು ಗಮನಿಸಿ. ಕೇಂದ್ರದ ಯೋಜನೆಗಳನ್ನು ಅವರು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ. ಅಂಥವರನ್ನು ನೋಡಿ ಸಿದ್ದರಾಮಯ್ಯ ಕಲಿಯಬೇಕು’ ಎಂದೂ ಹೇಳಿದರು.

‘ಮಹದಾಯಿ ಯೋಜನೆಯಲ್ಲೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಹಲವು ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರಾಜ್ಯಗಳಿಗೆ ಅನುಕೂಲ ಮಾಡಿದ್ದೇವೆ. ರಾಜ್ಯದ ಜನರ ಭಾವನೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಕೇಂದ್ರದ ವಿರುದ್ಧ ಎತ್ತಿಕಟ್ಟುವುದಕ್ಕೇ ಸಿ.ಎಂ ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ’ ಎಂದೂ ಹೇಳಿದರು.

‘₹15 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಕೇಂದ್ರದಿಂದ ಬಡ್ಡಿ ರಹಿತ ಸಾಲ ಪಡೆದಿದೆ. ಇನ್ನೂ ಸಾಕಷ್ಟು ಅವಕಾಶಗಳಿವೆ. ಭಾರತ್ ಮಾಲಾ ಯೋಜನೆಯಲ್ಲಿ ರಾಜ್ಯದಲ್ಲಿ ₹63,304 ಕೋಟಿ ಬಂಡವಾಳ ಹಾಕಿದ್ದು, 2,059 ಕಿ.ಮೀ ಹೆದ್ದಾರಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ₹8 ಸಾವಿರ ಕೋಟಿಯಲ್ಲಿ ಬೆಳಗಾವಿ– ಹುಣಗುಂದ ರಾಷ್ಟ್ರೀಯ ಹೆದ್ದಾರಿಗೂ ಶಂಕುಸ್ಥಾಪನೆ ಮಾಡಲಾಗಿದೆ. 2,750 ದಾಬಸಪೇಟೆ– ಹೊಸಕೋಟೆ ಲೋಕಾರ್ಪಣೆ ಆಗಿದೆ, ಬೆಂಗಳೂರು– ಮೈಸೂರು ಎಕ್ಸ್ಪ್ರೆಸ್ ವೆ ₹8,480 ಕೋಟಿ ವೆಚ್ಚ ಮಾಡಿ ಲೋಕಾರ್ಪಣೆ ಮಾಡಿದ್ದೇವೆ. ₹4,130 ಕೋಟಿಯಲ್ಲಿ 92 ಕಿ.ಮೀ ಉದ್ದದ ಮೈಸೂರು– ಕುಶಾಲನಗರ ಚತುಷ್ಪಥ ರಸ್ತೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಕೇಂದ್ರವು 8,191 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು 2025ರವರೆಗೆ ನಿರ್ಮಿಸಿದೆ. ಭಾರತ್ ಮಾಲಾ ಯೋಜನೆಯಲ್ಲಿ ಬೆಂಗಳೂರು– ಚೆನ್ನೈ ಎಕ್ಸ್ಪ್ರೆಸ್ ವೇ, ಬೆಂಗಳೂರು– ವರ್ತುಲ ರಸ್ತೆ, ಸೊಲ್ಲಾಪುರ– ಚೆನ್ನೈ ಗ್ರೀನ್ ಕಾರಿಡಾರ್ಗಳಿಗೆ ಅನುಮೋದನೆ ನೀಡಲಾಗಿದೆ’ ಎಂದೂ ಅವರು ವಿವರಿಸಿದರು.

‘ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ವಿಮಾನ ನಿಲ್ದಾಣಗಳಿಗೆ ಹೊಸ ಟರ್ಮಿನಲ್ ಕಟ್ಟಡಗಳು ಮಂಜೂರಾಗಿವೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ₹5 ಸಾವಿರ ಕೋಟಿ ಮಂಜೂರು ಮಾಡಿದ್ದೇವೆ. ಸರ್ಕಾರ ಬಳಸಿಕೊಳ್ಳಬೇಕು’ ಎಂದರು.

‘ರೈಲ್ವೆ ಇಲಾಖೆಯ ನೇಮಕಾತಿಗಳಲ್ಲಿ ಆಯಾ ರಾಜ್ಯದ ಭಾಷೆಗಳಲ್ಲೇ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಬಡ್ತಿ ಪರೀಕ್ಷೆಗಳಿಗೆ ಪ್ರಾದೇಶಿಕ ಭಾಷೆ ಬಳಸಿಲ್ಲ. ಇದರಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಬಾರಿಯ ಕೇಂದ್ರ ಬಜೆಟ್ ಜನಪರವಾಗಿದೆ. ಕರ್ತವ್ಯ ಭವನದಲ್ಲಿ ಮಂಡಿಸಿದ ಮೊದಲ ಬಜೆಟ್ ಕರ್ತವ್ಯನಿಷ್ಠೆಯ ಪ್ರತೀಕವಾಗಿದೆ’ ಎಂದೂ ಹೇಳಿದರು.

‘ಸಿದ್ದರಾಮಯ್ಯ ಭ್ರಷ್ಟಾಚಾರ ಶೀಘ್ರ ಹೊರಕ್ಕೆ’

‘ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹಳಿ ತಪ್ಪಿದೆ. ಸಿದ್ದರಾಮಯ್ಯ ನಡವಳಿಕೆ, ಕಾರ್ಯವೈಖರಿ, ಭ್ರಷ್ಟಾಚಾರ ಎಲ್ಲವೂ ಶೀಘ್ರ ಆಚೆಗೆ ಬರಲಿದೆ’ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

‘ಸಿದ್ದರಾಮಯ್ಯ ಅವರ ಮಗ ನೀಡುತ್ತಿರುವ ಹೇಳಿಕೆಗಳು ಅವರ ವಂಶಪಾರಂಪರ್ಯ ಅಧಿಕಾರದ ಪ್ರತೀಕ. ಮುಂದೆ ಕಾಂಗ್ರೆಸ್ಸಿಗರು ರಸ್ತೆ– ರಸ್ತೆಗಳಲ್ಲಿ ಹೊಡೆದಾಡುವ ಸ್ಥಿತಿ ಬರುತ್ತದೆ. ಸಿದ್ದರಾಮಯ್ಯ ಅವರ ಮಗ ನೀಡುತ್ತಿರುವ ಹೇಳಿಕೆಗಳೇ ಇದರ ಮುನ್ಸೂಚನೆಗಳು’ ಎಂದೂ ಅವರು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.