ಬೆಂಗಳೂರು: ‘2002ಕ್ಕೂ ಮೊದಲು ‘ವೀರಶೈವ ಲಿಂಗಾಯತ’ ಎಂಬ ಪ್ರಯೋಗ ಇರಲೇ ಇಲ್ಲ. ಸರ್ಕಾರದ ದಾಖಲೆಗಳಲ್ಲಿ, ಕಾನೂನುಗಳಲ್ಲಿ, ಜಾತಿ ಪ್ರಮಾಣ ಪತ್ರಗಳಲ್ಲಿ ‘ವೀರಶೈವ’ ಅಥವಾ ‘ಲಿಂಗಾಯತ’ ಎಂದು ಪ್ರತ್ಯೇಕವಾಗಿಯೇ ಇತ್ತು. 2002ರಲ್ಲಿ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ ಅವರು ಸರ್ಕಾರಕ್ಕೆ ಪತ್ರ ಬರೆದು ‘ವೀರಶೈವ ಲಿಂಗಾಯತ’ ಎಂದು ಮಾಡಿಸಿದರು’ ಎಂದು ಎಸ್.ಎಂ.ಜಾಮದಾರ ಹೇಳಿದರು.

ಈ ಕುರಿತು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

‘ಆನಂತರ ಜಾತಿ ಪ್ರಮಾಣಪತ್ರಗಳಲ್ಲಿ ‘ವೀರಶೈವ ಲಿಂಗಾಯತ’ ಎಂದೇ ನಮೂದಿಸಲಾಗುತ್ತಿದೆ. ಬೇರೆ ಆಯ್ಕೆಯೇ ಇಲ್ಲ. ವೀರಶೈವ–ಲಿಂಗಾಯತರ ನಡುವಣ ಈ ಸಮಸ್ಯೆಗೆ ಭೀಮಣ್ಣ ಅವರೇ ಕಾರಣ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದರು.
.ಲಿಂಗಾಯತರು ಹಿಂದೂಗಳೂ ಅಲ್ಲ, ವೀರಶೈವರೂ ಅಲ್ಲ: ಜಾಗತಿಕ ಲಿಂಗಾಯತ ಮಹಾಸಭಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.