ಬೆಂಗಳೂರು: ವರ್ಬ್ಯಾಟಲ್ ಪ್ರತಿಷ್ಠಾನ ನಡೆಸುವ ರಾಜ್ಯಮಟ್ಟದ ಚರ್ಚಾ ಸ್ಪರ್ಧೆ ಇದೇ ಜುಲೈ 3ರಿಂದ ಆಗಸ್ಟ್ 2ರವರೆಗೆ ನಡೆಯಲಿದೆ.

ಈ ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದೆ. 8ರಿಂದ 12 ವಯೋಮಿತಿಯವರಿಗೆ ಬಿಗಿನರ್, 12 ರಿಂದ 16 ವರ್ಷ ವಯೋಮಿತಿಯವರಿಗೆ ಜೂನಿಯರ್, 16ರಿಂದ 24 ವರ್ಷದವರಿಗೆ ಸೀನಿಯರ್ ಎಂದು ವಿಭಾಗಿಸಲಾಗಿದ್ದು, ಇಂಗ್ಲಿಷ್‌ನಲ್ಲಿ ಚರ್ಚೆ ನಡೆಸಬೇಕು. ಕನ್ನಡದ ವಿದ್ಯಾರ್ಥಿಗಳು 12ರಿಂದ 16 ವರ್ಷದವರ ವಿಭಾಗದಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರಿನಲ್ಲಿ ವಲಯ ಮಟ್ಟದ ಸ್ಪರ್ಧೆ ನಡೆಯಲಿದೆ. ವರ್ಬ್ಯಾಟಲ್ ಬಿಗಿನರ್ ಸ್ಪರ್ಧೆ ಬೆಂಗಳೂರಿನ ನಯನ ಸಭಾಂಗಣದಲ್ಲಿನಡೆಯಲಿದೆ.

ಶಾಲೆಗಳು ಸ್ಪರ್ಧಿಗಳ ತಂಡ ರಚಿಸಿ ಸ್ಪರ್ಧೆಗೆ ಕಳುಹಿಸಬಹುದು. ಇಲ್ಲವೇ, ಆಸಕ್ತ ವಿದ್ಯಾರ್ಥಿಗಳು ತಂಡ ಮಾಡಿಕೊಂಡು ಶಾಲೆಯ ಅನುಮತಿ ಪಡೆದು ಭಾಗವಹಿಸಬಹುದು. www.verbattle.com ಮೂಲಕ ಆನ್‌ಲೈನ್‌ನಲ್ಲಿಯೂ ಹೆಸರು ನೋಂದಣಿ ಮಾಡಿಸಬಹುದು.

‘ಎಲ್ಲ ವಿಭಾಗದ ಸ್ಪರ್ಧೆಯ ವಿಜೇತರಿಗೆ ಸೇರಿ ಒಟ್ಟು ₹3 ಲಕ್ಷದವರೆಗೆ ನಗದು ಬಹುಮಾನ ನೀಡಲಾಗುತ್ತದೆ. ಇದು ಚರ್ಚಾಸ್ಪರ್ಧೆಯ ವಿಜೇತರಿಗೆ ನೀಡುವ ಗರಿಷ್ಠ ನಗದು ಬಹುಮಾನವಾಗಿದೆ’ ಎಂದುಪ್ರತಿಷ್ಠಾನದ ಮುಖ್ಯಸ್ಥ ದೀಪಕ್ ತಿಮ್ಮಯ ತಿಳಿಸಿದ್ದಾರೆ. ಮಾಹಿತಿಗೆ, 98864–64641 ಅಥವಾ info@verbattle.com ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.