ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ: ರೇವಣ್ಣ ತಿರುಗೇಟು

ಕಾಂಗ್ರೆಸ್, ಬಿಜೆಪಿ ಮುಖಂಡರಿಗೆ ಶಾಸಕ ರೇವಣ್ಣ ತಿರುಗೇಟು
Last Updated 3 ಡಿಸೆಂಬರ್ 2021, 15:13 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದವರು ನೇರವಾಗಿ ಚುನಾವಣೆಎದುರಿಸಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಹೊರತು ಹಿಂಬಾಗಿಲಿನಿಂದ ಬಂದುರಾಜಕಾರಣ ಮಾಡುತ್ತಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ಮತ್ತು ಬಿಜೆಪಿಮುಖಂಡರಿಗೆ ತಿರುಗೇಟು ನೀಡಿದರು.

ಗೌಡರ ಕುಟುಂಬದ ಯಾವ ಸದಸ್ಯರೂ ನಾಮ ನಿರ್ದೇಶನದ ಹುದ್ದೆಗಳನ್ನು ಪಡೆದುಕೊಂಡುಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ಮುಖಂಡರ ಕುಟುಂಬದವರುರಾಜಕೀಯದಲ್ಲಿ ಇಲ್ಲವೇ?ಎರಡು ರಾಷ್ಟ್ರೀಯ ಪಕ್ಷಗಳು ಕುಟುಂಬ ರಾಜಕಾರಣವನ್ನು ನಿಷೇಧಿಸುವ ಕಾನೂನು ತರಲಿ. ಗೌಡರ ಕುಟುಂಬದ ರಾಜಕೀಯ ಅಂತ್ಯ ಮಾಡುವುದು ಕಾಂಗ್ರೆಸ್ ಅಥವಾ ಬಿಜೆಪಿಯಿಂದಸಾಧ್ಯವಿಲ್ಲ. ಆದರೆ. ಕಾಂಗ್ರೆಸ್‍ನ ಅವನತಿಯಾಗದಂತೆ ಮೊದಲು ಆ ಪಕ್ಷದವರು ನೋಡಿಕೊಳ್ಳಲಿ ಎಂದುಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಹನೂರು ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‍– ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲವೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ಈಗ ಗಾಂಧಿ, ನೆಹರು ಕಟ್ಟಿದ ಕಾಂಗ್ರೆಸ್ ಪಕ್ಷ ಇಲ್ಲ. ಕಾಂಗ್ರೆಸ್ ನಿರ್ನಾಮ ಆಗುವ ಕಾಲ ಸನ್ನಿಹಿತವಾಗಿದೆ ಎಂದ ರೇವಣ್ಣ ಅವರು,ಹತ್ತು ವರ್ಷ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದರೂ ಕಾವೇರಿ ವಿವಾದದಲ್ಲಿಕರ್ನಾಟಕಕ್ಕೆ ನ್ಯಾಯ ಕೊಡಿಸಲಾಗಲಿಲ್ಲ. ಮೇಕೆದಾಟು ಯೋಜನೆಯ ಜಾರಿಯ ಬಗ್ಗೆ ಈಗಮಾತನಾಡುತ್ತಿರುವ ಕಾಂಗ್ರೆಸ್ ಮುಖಂಡರು ಅಧಿಕಾರದಲ್ಲಿದ್ದಾಗ ಏಕೆ ಯೋಜನೆ ಜಾರಿಯಬದ್ಧತೆ ತೋರಲಿಲ್ಲ ಎಂದರು.

2004 ರಿಂದ 2007 ರ ಅವಧಿಯಲ್ಲಿ ಇಂಧನ ಸಚಿವನಾಗಿದ್ದಾಗಲೇ ನೀರಾವರಿ ತಜ್ಞಕೆ.ಸಿ.ರೆಡ್ಡಿ ಮಾರ್ಗದರ್ಶನದಲ್ಲಿ ಮೇಕೆದಾಟು ಯೋಜನೆಯಲ್ಲಿ 500 ಮೆಗಾ ವಾಟ್‌ ವಿದ್ಯುತ್ಉತ್ಪಾದನೆಯ ಪ್ರಸ್ತಾವನೆ ಸಿದ್ಧಪಡಿಸಿ ಅನುಷ್ಠಾನದ ಪ್ರಯತ್ನ ಮಾಡಿದ್ದೆ. ಆನಂತರ ಅಧಿಕಾರಕ್ಕೆಬಂದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಯೋಜನೆ ಅನುಷ್ಠಾನದ ಪ್ರಯತ್ನ ಮಾಡಲಿಲ್ಲ. ಈಗಚುನಾವಣೆ ಸಂದರ್ಭದಲ್ಲಿ ಮೇಕೆದಾಟು ಯೋಜನೆಯನ್ನು ಪ್ರಸ್ತಾಪಿಸಿ ಜನರನ್ನು ಮರುಳು
ಮಾಡಲು ಯತ್ನಿಸುತ್ತಿವೆ ಎಂದು ದೂರಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಲ್ಲ. ಸಂಸದರ ಕಾರನ್ನು ಬಳಸಿಲ್ಲ. ಸಂಸದರ ನಿವಾಸವನ್ನೂ ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಂಡಿಲ್ಲ. ಯಾವ ಗ್ರಾಮ ಪಂಚಾಯತಿ ಸದಸ್ಯರ ಮೇಲೂ ನಾವು ಒತ್ತಡ ಹಾಕಿಲ್ಲ. ಗ್ರಾಮ ಪಂಚಾಯತಿ ಸದಸ್ಯ ಬಳಿ ನಾವು ಮತ ಯಾಚನೆ ಮಾಡಿದ್ದೇವೇಯೇ ಹೊರತು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಬೇಕೆಂದುಬೆದರಿಕೆ ಒಡ್ಡಿಲ್ಲ. ಅಂತಹ ದಾಖಲೆಗಳಿದ್ದರೆ ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಲಿ ಎಂದು ರೇವಣ್ಣ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಮುಖಂಡರಾದ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ಲಕ್ಷ್ಮಣೇಗೌಡ, ರಘುಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT