12 ಸಾವಿರಕ್ಕೂ ಹೆಚ್ಚು ಚೀಟಿ ರದ್ದತಿಗೆ ಯತ್ನ
ಆರೋಪಿಗಳು ತಾವು ಸೃಷ್ಟಿಸಿದ್ದ ಬಳಕೆದಾರರ ನಕಲಿ ಖಾತೆಗಳ ಮೂಲಕ ಅಕ್ರಮವಾಗಿ 12,000ಕ್ಕೂ ಹೆಚ್ಚು ಮತದಾರರ ಚೀಟಿಗಳನ್ನು ರದ್ದುಪಡಿಸಲು ಅರ್ಜಿ ಸಲ್ಲಿಸಲು ಯತ್ನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆದರೆ ಒಂದು ‘ಬಳಕೆದಾರರ ಖಾತೆ’ ಮೂಲಕ ಗರಿಷ್ಠ ಆರು ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ಹೀಗಾಗಿ ಸುಮಾರು 6,000 ಅರ್ಜಿಗಳು ಸಲ್ಲಿಕೆಯ ವೇಳೆಯೇ ತಿರಸ್ಕೃತವಾಗಿವೆ. 6,018 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದೂ ಎಸ್ಐಟಿ ಮೂಲಗಳು ಹೇಳಿವೆ.