ಬೆಂಗಳೂರು: ರಾಜ್ಯ ಮುಖ್ಯ ಚುನಾವಣಾಧಿಕಾರಿಯ ಜಾಲತಾಣ ಮತ್ತು ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್ನಲ್ಲಿ, ರಾಜ್ಯದ 2024ರ ಅವಧಿಯ ಮತದಾರರ ಪಟ್ಟಿಗಳೇ ಕಾಣಿಸುತ್ತಿಲ್ಲ.

2024ರ ಲೋಕಸಭಾ ಚುನಾವಣೆಯಲ್ಲಿ, ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮತದಾರರನ್ನು ಅಕ್ರಮವಾಗಿ ಸೇರಿಸಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ತೆಗೆದುಹಾಕಿದೆ ಎಂದೂ ಶುಕ್ರವಾರ ಆಪಾದಿಸಿದರು.

ಇದನ್ನು ಪರಿಶೀಲಿಸುವ ಸಲುವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಯ ಅಧಿಕೃತ ಜಾಲತಾಣದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಲು ಯತ್ನಿಸಲಾಯಿತು. ಆದರೆ ಯಾವುದೇ ಕಡತಗಳು ಡೌನ್ಲೋಡ್ ಆಗಲಿಲ್ಲ.

ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಲು ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಪಾರ್ಟ್ ಸಂಖ್ಯೆ, ಮತದಾರರ ಪಟ್ಟಿಯ ವರ್ಷ ಮತ್ತು ಜಾಲತಾಣದಲ್ಲಿ ಗೋಚರಿಸುವ ‘ಕ್ಯಾಪ್ಚಾ’ ಕೋಡ್ ಅನ್ನು ತುಂಬಿಸಬೇಕು. ಈ ಎಲ್ಲ ವಿವರಗಳನ್ನು ಸರಿಯಾಗಿ ತುಂಬಿದ ನಂತರವೂ ಮತದಾರರ ಪಟ್ಟಿ ಡೌನ್ಲೋಡ್ ಆಗುತ್ತಿಲ್ಲ.

ಮಹದೇವಪುರ ಕ್ಷೇತ್ರದ ಯಾವುದೇ ಪಾರ್ಟ್ನ ಮತದಾರರ ಪಟ್ಟಿ ಡೌನ್ಲೋಡ್ಗೆ ವಿವರಗಳನ್ನು ನಮೂದಿಸಿದರೆ, ‘ವಾರ್ನಿಂಗ್ * ಸಕ್ಸಸ್’ ಎಂಬ ಸಂದೇಶ ಬಿತ್ತರವಾಗುತ್ತದೆ. ಆದರೆ ಯಾವುದೇ ಕಡತ ಡೌನ್ಲೋಡ್ ಆಗುತ್ತಿಲ್ಲ.

ಬಿಟಿಎಂ ಬಡಾವಣೆ, ವರುಣ, ಚಾಮರಾಜ, ದಾಸರಹಳ್ಳಿ, ಗೋವಿಂದರಾಜನಗರ ಕ್ಷೇತ್ರಗಳ ವಿವರವನ್ನು ನಮೂದಿಸಿದಾಗಲೂ ಯಾವುದೇ ಕಡತ ಡೌನ್ಲೋಡ್ ಆಗುತ್ತಿಲ್ಲ. ಬದಲಿಗೆ, ‘ಇನ್ವ್ಯಾಲಿಡ್ ಕ್ಯಾಪ್ಚಾ, ಎರರ್’ ಎಂಬ ಸಂದೇಶಗಳು ಬರುತ್ತಿವೆ. ಸರಿಯಾದ ವಿವರಗಳನ್ನು ನಮೂದಿಸಿ ಹಲವು ಬಾರಿ ಯತ್ನಿಸಿದರೂ ‘ಎರರ್’ ಸಂದೇಶಗಳು ಬರುತ್ತಿವೆಯೇ ಹೊರತು, ಮತದಾರರ ಪಟ್ಟಿ ಡೌನ್ಲೋಡ್ ಆಗುತ್ತಿಲ್ಲ.

ಆದರೆ 2025ರ ಕರಡು, ಅಂತಿಮ ಮತ್ತು ಹೆಚ್ಚುವರಿ ಮತದಾರರ ಪಟ್ಟಿಗಳು ಯಾವುದೇ ಸಮಸ್ಯೆ ಇಲ್ಲದೆ ಡೌನ್ಲೋಡ್ ಆಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.