ಹುಬ್ಬಳ್ಳಿ:ಸಚಿವರ ಕಚೇರಿಯಲ್ಲಿ ಹಲವಾರು ಸಿಬ್ಬಂದಿ ಇರುತ್ತಾರೆ. ಅವರ ಬಳಿ ಹಣ ಸಿಕ್ಕರೆ ಸಚಿವರಿಗೆ ಏನು ಸಂಬಂಧ? ವಿಧಾನಸೌಧ ವೆಸ್ಟ್ ಗೇಟ್ ನಲ್ಲಿ ಸಿಕ್ಕಿರುವ ಹಣದ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಸಂಬಂಧಪಟ್ಟ ಸಚಿವರು ಹಣದ ಬಗ್ಗೆ ಹೇಳುತ್ತಾರೆ ಎಂದರು.

* ಇದನ್ನೂ ಓದಿ:ಸಚಿವ ಪುಟ್ಟರಂಗ ಶೆಟ್ಟಿ ಟೈಪಿಸ್ಟ್ ಬಳಿ ₹25.76 ಲಕ್ಷ ಪತ್ತೆ !

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್,ದಾಖಲೆ ಇಲ್ಲದ ₹25.76 ಲಕ್ಷ ಸಾಗಿಸುತ್ತಿದ್ದ ವೇಳೆಯಲ್ಲೇ ವಿಧಾನಸೌಧದ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.

‘ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ತಯಾರಿ’

ಚಡಚಣ ನಕಲಿ ಎನ್ ಕೌಂಟರ್ ಸಂಬಂಧಿಸಿದಂತೆಈಗಾಗಲೇ ಎರಡು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.ಅಲ್ಲದೆ ಇನ್ನೊಂದು ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ತಯಾರಿ ನಡೆದಿದೆ.ನಮ್ಮ ಸಿಐಡಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಪ್ರಕರಣದಲ್ಲಿ ನಮ್ಮ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

ನನಗೆ ಜೀರೊ ಟ್ರಾಫಿಕ್ ಬೇಡ ಅಂತ ಈಗಾಗಲೇ ಹೇಳಿದ್ದೇನೆ. ಮೊನ್ನೆ ಕೆಲ ಅಧಿಕಾರಿ ಸಿಂಗಲ್ ಲೈನ್ ಇದ್ದಾಗ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.ಅವರಿಗೆ ಗೊತ್ತಾಗಿಲ್ಲ. ಅವರಿಗೆ ಎಚ್ಚರಿಕೆ ನೀಡುವಂತೆ ಹೇಳಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.