ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಗೂರ: ಶಂಕಿತ ಡೆಂಗಿಗೆ ಮಗು ಬಲಿ ?

Last Updated 25 ಸೆಪ್ಟೆಂಬರ್ 2018, 15:37 IST
ಅಕ್ಷರ ಗಾತ್ರ

ನಿಡಗುಂದಿ:ಶಂಕಿತ ಡೆಂಗಿಯಿಂದ ಬಳಲುತ್ತಿದ್ದ ಯಲಗೂರು ಗ್ರಾಮದ ಒಂಭತ್ತು ತಿಂಗಳ ಹಸುಗೂಸು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದೆ.

ನಿಖಿಲ ಶ್ರೀಶೈಲ ಬೆಳಗಲ್ಲ ಮೃತ ಮಗು.

ಮೂರು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಂಕಿತ ಡೆಂಗಿಯಿಂದಲೇ ಮಗು ಮೃತಪಟ್ಟಿದೆ ಎಂದು ಪೋಷಕರು ತಿಳಿಸಿದ್ದಾರೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.

‘ಮಗುವಿಗೆ ಜ್ವರವಿತ್ತು. ಪೋಷಕರು ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಮಗು ಸಾವಿಗೆ ಡೆಂಗಿ ಕಾರಣವಲ್ಲ, ಬೇರೆ ಕಾರಣದಿಂದ ಮಗು ಮೃತಪಟ್ಟಿದೆ’ ಎಂದು ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಎಸ್‌.ಎಸ್.ಓತಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮದಲ್ಲಿ ಕಳೆದ 15 ದಿನಗಳಿಂದ ವೈರಲ್‌ ಫೀವರ್ ಕಂಡು ಬಂದಿದ್ದರಿಂದ ಸ್ವಚ್ಛತೆ ಕಾಪಾಡುವಂತೆ, ಫಾಗಿಂಗ್‌ ಕೈಗೊಳ್ಳುವಂತೆ ಯಲಗೂರು ಗ್ರಾಮ ಪಂಚಾಯ್ತಿಗೆ ಪತ್ರ ಬರೆದು ತಿಳಿಸಲಾಗಿದೆ’ ಎಂದು ಡಾ.ಓತಗೇರಿ ಹೇಳಿದರು.

‘ಸರಾಗವಾಗಿ ಹರಿಯದ ಚರಂಡಿ ನೀರಿನ ಕಾರಣ ಸೊಳ್ಳೆಗಳು ಹೆಚ್ಚಿವೆ. ಫಾಗಿಂಗ್‌ ಮಾಡಿಲ್ಲ, ಇಂದು ಮಗು ಮೃತಪಟ್ಟ ನಂತರ ಗ್ರಾಮ ಪಂಚಾಯ್ತಿ ಆಡಳಿತ ಎಚ್ಚೆತ್ತುಕೊಂಡಿದೆ, ದೇವಸ್ಥಾನದ ಆವರಣದ ಬಳಿ ಮಾತ್ರ ಹೆಚ್ಚಾಗಿ ಸ್ವಚ್ಛತೆ ಮಾಡುತ್ತಾರೆ, ಉಳಿದೆಡೆ ಗಮನ ಹರಿಸುವುದಿಲ್ಲ, ಪಿಡಿಓ ಅವರನ್ನು ಕೇಳಿದರೆ ಸಿಡುಕಿನಿಂದ ಮಾತನಾಡಿಸುತ್ತಾರೆ, ಪಿಡಿಓ ಮೊದಲೇ ಸ್ವಚ್ಛತೆಗೊಳಿಸಿದ್ದರೆ ಮಗು ಮೃತಪಡುತ್ತಿರಲಿಲ್ಲ’ ಎಂದು ಗ್ರಾಮದ ಪ್ರೇಮಾ ಚೋಪಡೆ, ಗಂಗೂಬಾಯಿ ಗಾಯಕವಾಡ, ರಂಗನಾಥ ತೆಳಗಡೆ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT