ಬೆಂಗಳೂರು: ಮಹಾ ಶಿವರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲು ಓಡಿಸಲಿದೆ.
.PV Web Exclusive: ಬದುಕಿಗಾಗಿ ಗುಳೆ ಹೊರಟವರ ಗೋಳಿನ ರೈಲು ಪ್ರಯಾಣ....
ರೈಲು ಸಂಖ್ಯೆ 06507 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್ಪ್ರೆಸ್ ರೈಲು ಫೆ.13ರಂದು ಮಧ್ಯಾಹ್ನ 12.30 ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 06:45ಕ್ಕೆ ಮಡಗಾಂವ್ ತಲುಪಲಿದೆ.

ರೈಲು ಸಂಖ್ಯೆ 06508 ಮಡಗಾಂವ್-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಫೆ. 16 ರಂದು ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್ನಿಂದ ಹೊರಟು, ಮರುದಿನ ಬೆಳಿಗ್ಗೆ 04:45ಕ್ಕೆ ಯಶವಂತಪುರ ತಲುಪಲಿದೆ.

ಚಿಕ್ಕಬಾಣಾವರ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
.ಫೆ.2ರಿಂದ ಬೆಂಗಳೂರು-ಮಾರಿಕುಪ್ಪಂ ರೈಲು ಪುನರಾರಂಭ.
ಈ ರೈಲು 20 ಬೋಗಿಗಳನ್ನು ಒಳಗೊಂಡಿದ್ದು , ಇದರಲ್ಲಿ 1 ಪ್ರಥಮ ದರ್ಜೆ ಎಸಿ ಕಮ್ ಎಸಿ 2-ಟೈರ್ ಬೋಗಿ, 2 ಎಸಿ 2-ಟೈರ್ ಬೋಗಿಗಳು, 2 ಎಸಿ 3-ಟೈರ್ ಬೋಗಿಗಳು, 9 ಸ್ಲೀಪರ್ ಕ್ಲಾಸ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ.
.ಬೆಂಗಳೂರು: 2030ಕ್ಕೆ ಉಪನಗರ ರೈಲು ಪೂರ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.