ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯಂತೆ ಮಾಸಿಕ 30 ಕೆ.ಜಿ. ಅಕ್ಕಿ ವಿತರಿಸುವ ಯೋಜನೆಗೆ ಅಗತ್ಯ ಪ್ರಮಾಣದ ಅಕ್ಕಿ ಲಭ್ಯವಾಗದ ಕಾರಣದಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯ ವಿತರಣೆಗೆ ಯೂನಿಟ್ ಪದ್ಧತಿಯನ್ನು ಉಳಿಸಿಕೊಳ್ಳಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಪ್ರತಿ ಯೂನಿಟ್ಗೆ (ಒಬ್ಬ ಸದಸ್ಯನಿಗೆ) ಹತ್ತು ಕೆ.ಜಿ. ಹಾಗೂ ಕುಟುಂಬವೊಂದಕ್ಕೆ ಗರಿಷ್ಠ 30 ಕೆ.ಜಿ. ಅಕ್ಕಿ ವಿತರಿಸುವ ತೀರ್ಮಾನವನ್ನು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಒಬ್ಬ ಸದಸ್ಯ ಇದ್ದರೆ ಮಾಸಿಕ 10 ಕೆ.ಜಿ, ಇಬ್ಬರು ಇರುವ ಕುಟುಂಬಕ್ಕೆ 20 ಕೆ.ಜಿ., ಮೂವರು ಹಾಗೂ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳಿಗೆ 30 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಪಡಿತರ ವ್ಯವಸ್ಥೆಯಡಿ ರಾಗಿ, ಜೋಳ, ಗೋಧಿ ವಿತರಣೆಯ ಕುರಿತೂ ಚಿಂತನೆ ನಡೆದಿದೆ.

ಒಬ್ಬ ಸದಸ್ಯರಿಗೆ ತಲಾ ನಾಲ್ಕು ಕೆ.ಜಿ. ಆಹಾರ ಧಾನ್ಯ ವಿತರಿಸುವ ಯೂನಿಟ್ ಪದ್ಧತಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಈವರೆಗೂ ಅನುಸರಿಸಲಾಗುತ್ತಿತ್ತು. ಈ ಪದ್ಧತಿಯನ್ನು ಬದಲಿಸಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ವಿತರಣೆಗೆ ಇದುವರೆಗೆ ವಾರ್ಷಿಕ 1,200 ಕೋಟಿ ರೂಪಾಯಿ ವೆಚ್ಚ ಆಗುತ್ತಿತ್ತು. ಪ್ರತಿ ಕೆ.ಜಿ.ಗೆ ಒಂದು ರೂಪಾಯಿ ದರದಲ್ಲಿ ಎಲ್ಲ ಬಿಪಿಎಲ್ ಕುಟುಂಬಗಳಿಗೂ 30 ಕೆ.ಜಿ. ಅಕ್ಕಿ ವಿತರಿಸಿದ್ದರೆ 5,800 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಸರ್ಕಾರ ಯೂನಿಟ್ ಪದ್ಧತಿಯಲ್ಲಿ ಬದಲಾವಣೆ ತಂದಿರುವುದರಿಂದ ವಿತರಣೆಗೆ ಬೇಕಿರುವ ಅಕ್ಕಿಯ ಪ್ರಮಾಣದಲ್ಲಿ 40,000 ಟನ್ ಕಡಿಮೆ ಆಗಲಿದೆ. ಇದರಿಂದಾಗಿ ಯೋಜನೆಯ ಒಟ್ಟು ವಾರ್ಷಿಕ ವೆಚ್ಚ 4,900 ಕೋಟಿ ರೂಪಾಯಿ ಆಗಲಿದೆ.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, `ಒಬ್ಬನೇ ಸದಸ್ಯ ಇರುವ ಎಂಟು ಲಕ್ಷ ಬಿಪಿಎಲ್ ಕುಟುಂಬಗಳು ರಾಜ್ಯದಲ್ಲಿವೆ. ಇಬ್ಬರು ಸದಸ್ಯರಿರುವ ಕುಟುಂಬಗಳ ಸಂಖ್ಯೆಯೂ ದೊಡ್ಡದಿದೆ. ಎಲ್ಲ ಕುಟುಂಬಗಳಿಗೂ 30 ಕೆ.ಜಿ. ವಿತರಣೆಗೆ ಅಗತ್ಯ ಇರುವಷ್ಟು ಅಕ್ಕಿ ಲಭ್ಯವಾಗುತ್ತಿಲ್ಲ. ಈ ಕಾರಣದಿಂದ ಸರ್ಕಾರ ತಾತ್ಕಾಲಿಕವಾಗಿ ಈ ಬದಲಾವಣೆ ಮಾಡಿದೆ' ಎಂದರು.

ಅಗ್ಗದ ದರದಲ್ಲಿ ಅಕ್ಕಿ ವಿತರಿಸುವ ಯೋಜನೆಗೆ 2.45 ಲಕ್ಷ ಟನ್ ಅಕ್ಕಿ ಬೇಕಿದೆ. ಕೇಂದ್ರ ಸರ್ಕಾರ ಈಗ 1.42 ಲಕ್ಷ ಟನ್ ಅಕ್ಕಿಯನ್ನು ಒದಗಿಸುತ್ತಿದೆ. 1.03 ಲಕ್ಷ ಟನ್ ಕೊರತೆ ಆಗುತ್ತದೆ. ಈ ಅಕ್ಕಿಯನ್ನು ರಾಷ್ಟ್ರೀಯ ಸರಕು ಮತ್ತು ಪದಾರ್ಥಗಳ ವಿನಿಮಯ ಕೇಂದ್ರ (ಎನ್ಸಿಡಿಎಕ್ಸ್) ಸೇರಿದಂತೆ ಪ್ರಮುಖ ಸರ್ಕಾರಿ ಸ್ವಾಮ್ಯದ ಮಾರಾಟ ಸಂಸ್ಥೆಗಳ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ. ಒಡಿಶಾ, ಛತ್ತೀಸ್ಗಡ ಮತ್ತಿತರ ರಾಜ್ಯಗಳಲ್ಲಿ ಅಕ್ಕಿ ಲಭ್ಯ ಇದ್ದು, ಈ ಕುರಿತು ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮತ್ತು ಸಾಗಣೆಗೆ ಪ್ರತಿ ಕೆ.ಜಿ.ಗೆ 30 ರೂಪಾಯಿ ವೆಚ್ಚವಾಗಬಹುದು ಎಂಬುದಾಗಿ ಅಂದಾಜು ಮಾಡಲಾಗಿದೆ ಎಂದು ವಿವರಿಸಿದರು.

ಜುಲೈ 1ರಿಂದಲೇ ಯೋಜನೆ ಜಾರಿಗೆ ಬರಲಿದೆ. ಜುಲೈ10ರೊಳಗೆ ಅಧಿಕೃತ ಕಾರ್ಯಕ್ರಮ ನಡೆಸಲಾಗುವುದು. ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿ ಮತ್ತು ಉಳಿದ ಸಚಿವರು ಆಯಾ ಜಿಲ್ಲೆಗಳಲ್ಲಿ ಯೋಜನೆಗೆ ಚಾಲನೆ ನೀಡುವರು ಎಂದು ತಿಳಿಸಿದರು.

ಆಯಾ ಭಾಗದ ಆಹಾರ ಪದ್ಧತಿಗೆ ಅನುಗುಣವಾಗಿ ಪ್ರತಿ ಕೆ.ಜಿ. ಒಂದು ರೂಪಾಯಿ ದರದಲ್ಲಿ ಗೋಧಿ, ಜೋಳ, ರಾಗಿಯನ್ನೂ ವಿತರಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆಯೂ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆದಿದೆ. ಗೋಧಿ, ಜೋಳ, ರಾಗಿ ವಿತರಣೆ ಕುರಿತು ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ಹೇಳಿದರು.

`ಸಕಾಲ' ವಿಸ್ತರಣೆ:
ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳ ಲಭ್ಯತೆಗೆ ಕಾಲಮಿತಿ ವಿಧಿಸುವ `ಸಕಾಲ' ಯೋಜನೆಯಡಿ ವಿವಿಧ ಇಲಾಖೆಗಳ 110 ಸೇವೆಗಳನ್ನು ಸೇರಿಸುವ ಪ್ರಸ್ತಾವಕ್ಕೂ ಸಂಪುಟ ಅನುಮೋದನೆ ನೀಡಿದೆ. ಈವರೆಗೂ `ಸಕಾಲ'ದ ವ್ಯಾಪ್ತಿಯಲ್ಲಿ 265 ಸೇವೆಗಳಿದ್ದವು. ಈಗ ಈ ಸೇವೆಗಳ ಸಂಖ್ಯೆ 375ಕ್ಕೆ ಏರಿಕೆಯಾಗಿದೆ.

ವಿವಿಧ ಇಲಾಖೆಗಳ ಒಟ್ಟು 1,800 ಸೇವೆಗಳನ್ನು ಸಕಾಲ ಯೋಜನೆಯಡಿ ತರುವ ಪ್ರಸ್ತಾವ ಸರ್ಕಾರದ ಮುಂದಿದೆ. ಹಂತ ಹಂತವಾಗಿ ಈ ಪ್ರಕ್ರಿಯೆಯನ್ನು ನಡೆಸಲಾಗುವುದು. ತಿಂಗಳ ಮೊದಲ ಹಾಗೂ ಮೂರನೇ ಬುಧವಾರ `ಚಂದನ' ವಾಹಿನಿಯಲ್ಲಿ `ಸಕಾಲ' ಯೋಜನೆ ಕುರಿತು ಸಂವಾದ ಕಾರ್ಯಕ್ರಮ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ತಿಂಗಳೊಳಗೆ ಚಾಲನೆ:
ಆರೋಗ್ಯದ ಸಮಸ್ಯೆಗಳು ಹಾಗೂ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ನೀಡುವ `ಆರೋಗ್ಯ ಸಹಾಯವಾಣಿ'ಗೆ (104) ತಿಂಗಳೊಳಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಹುಬ್ಬಳ್ಳಿಯಲ್ಲಿ ಸಹಾಯವಾಣಿಯ ಕೇಂದ್ರ ಸ್ಥಾಪಿಸಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಅದರಂತೆ ಅಲ್ಲಿಯೇ ಕೇಂದ್ರ ಅಸ್ತಿತ್ವಕ್ಕೆ ಬರಲಿದೆ ಎಂದರು.

ಸರ್ಕಾರಿ-ಖಾಸಗಿ ಸಹಭಾಗಿತ್ವದ ಯೋಜನೆಗಳಲ್ಲಿ (ಪಿಪಿಪಿ) ಸರ್ಕಾರದ ಪಾಲು ಭರಿಸುವಿಕೆಯಲ್ಲಿ (ವಯಬಿಲಿಟಿ ಗ್ಯಾಪ್ ಫಂಡಿಂಗ್-ವಿಜಿಎಫ್) ಕೇಂದ್ರ ಸರ್ಕಾರದ ವಿಜಿಎಫ್ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳುವ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಫಲಿತಾಂಶವನ್ನು ಖಚಿತಪಡಿಸುವ `ರಿಸಲ್ಟ್ಸ್ ಫ್ರೇಂವರ್ಕ್ ಡಾಕ್ಯುಮೆಂಟ್' ಮಾರ್ಗದರ್ಶಿ ಸೂತ್ರಗಳನ್ನೂ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ.

`ಸಕಾಲ' ವಿಸ್ತರಣೆ: ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳ ಲಭ್ಯತೆಗೆ ಕಾಲಮಿತಿ ವಿಧಿಸುವ `ಸಕಾಲ' ಯೋಜನೆಯಡಿ ವಿವಿಧ ಇಲಾಖೆಗಳ 110 ಸೇವೆಗಳನ್ನು ಸೇರಿಸುವ ಪ್ರಸ್ತಾವಕ್ಕೂ ಸಂಪುಟ ಅನುಮೋದನೆ ನೀಡಿದೆ. ಈವರೆಗೂ `ಸಕಾಲ'ದ ವ್ಯಾಪ್ತಿಯಲ್ಲಿ 265 ಸೇವೆಗಳಿದ್ದವು. ಈಗ ಈ ಸೇವೆಗಳ ಸಂಖ್ಯೆ 375ಕ್ಕೆ ಏರಿಕೆಯಾಗಿದೆ.

ತಿಂಗಳೊಳಗೆ ಚಾಲನೆ: ಆರೋಗ್ಯದ ಸಮಸ್ಯೆಗಳು ಹಾಗೂ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ನೀಡುವ `ಆರೋಗ್ಯ ಸಹಾಯವಾಣಿ'ಗೆ (104) ತಿಂಗಳೊಳಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಹುಬ್ಬಳ್ಳಿಯಲ್ಲಿ ಸಹಾಯವಾಣಿಯ ಕೇಂದ್ರ ಸ್ಥಾಪಿಸಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಅದರಂತೆ ಅಲ್ಲಿಯೇ ಕೇಂದ್ರ ಅಸ್ತಿತ್ವಕ್ಕೆ ಬರಲಿದೆ ಎಂದರು. ಸರ್ಕಾರಿ-ಖಾಸಗಿ ಸಹಭಾಗಿತ್ವದ ಯೋಜನೆಗಳಲ್ಲಿ (ಪಿಪಿಪಿ) ಸರ್ಕಾರದ ಪಾಲು ಭರಿಸುವಿಕೆಯಲ್ಲಿ (ವಯಬಿಲಿಟಿ ಗ್ಯಾಪ್ ಫಂಡಿಂಗ್-ವಿಜಿಎಫ್) ಕೇಂದ್ರ ಸರ್ಕಾರದ ವಿಜಿಎಫ್ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳುವ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಫಲಿತಾಂಶವನ್ನು ಖಚಿತಪಡಿಸುವ `ರಿಸಲ್ಟ್ಸ್ ಫ್ರೇಂವರ್ಕ್ ಡಾಕ್ಯುಮೆಂಟ್' ಮಾರ್ಗದರ್ಶಿ ಸೂತ್ರಗಳನ್ನೂ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ

ಸಿಎಂ ವಿವೇಚನೆಗೆ ಹೊಸ ಸಿಎಸ್
ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯವರನ್ನು ಆಯ್ಕೆಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡುವ ತೀರ್ಮಾನವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ಕೈಗೊಂಡಿದೆ.

ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಈ ತಿಂಗಳ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಬೇಕಿದೆ. ಈ ಕುರಿತು ಗುರುವಾರದ ಸಭೆಯಲ್ಲಿ ಚರ್ಚೆ ನಡೆಯಿತು. ಅಂತಿಮವಾಗಿ ಮುಖ್ಯ ಕಾರ್ಯದರ್ಶಿಯವರನ್ನು ಆಯ್ಕೆಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲು ಸಭೆ ನಿರ್ಧರಿಸಿತು ಎಂದು ಜಯಚಂದ್ರ ತಿಳಿಸಿದರು.

ಹಿರಿಯ ಐಎಎಸ್ ಅಧಿಕಾರಿಗಳಾದ ಸುಧೀರ್ ಕೃಷ್ಣ, ಕೌಶಿಕ್ ಮುಖರ್ಜಿ, ಲಕ್ಷ್ಮಿ ವೆಂಕಟಾಚಲಂ, ಅರವಿಂದ್ ಜಾಧವ್, ಕೆ.ಎನ್.ಶ್ರೀವಾಸ್ತವ್, ಎ.ಪಿ.ಜೋಷಿ, ಎಲ್.ವಿ.ನಾಗರಾಜನ್, ಜಿ.ಸಿ.ಆರ್.ಸುಬ್ರಮಣಿಯನ್ ಸೇರಿದಂತೆ 14 ಅಧಿಕಾರಿಗಳ ಹೆಸರು ಚರ್ಚೆಯಲ್ಲಿದೆ ಎಂದು ವಿವರ ನೀಡಿದರು.

ಇತರ ಪ್ರಮುಖ ನಿರ್ಣಯಗಳು
-ಔಷಧ ನಿಯಂತ್ರಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಕರಡು ಪ್ರತಿಗೆ ಒಪ್ಪಿಗೆ.
- ಬೃಹತ್ ಹೂಡಿಕೆದಾರರ ಆಕರ್ಷಣೆಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ
- ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬೆಲೆ ಸ್ಥಿರೀಕರಣ ಮತ್ತು ಬೆಂಬಲ ಬೆಲೆ ನಿರ್ಧರಿಸಲು ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.