ಬೆಂಗಳೂರು: ರಾಜ್ಯದ ವಿವಿಧ ಗಣಿ ಪ್ರದೇಶಗಳಲ್ಲಿ ಖಾಸಗಿ ಅದಿರು ಸಂಗ್ರಹಾಗಾರಗಳಲ್ಲಿ (ಸ್ಟಾಕ್ಯಾರ್ಡ್) ಇರುವ 5.32 ಲಕ್ಷ ಟನ್ ಅದಿರನ್ನು ವಶಕ್ಕೆ ಪಡೆದು, `ಇ-ಹರಾಜು~ ಮೂಲಕ ವಿಲೇವಾರಿ ಮಾಡುವಂತೆ ಸುಪ್ರೀಂಕೋರ್ಟ್ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಬುಧವಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ.

<caption></caption>

ಬಿಎಸ್ವೈ ಪಾಲಿಗೆ ನಿರ್ಣಾಯಕ ದಿನ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಸದಸ್ಯರು ಮತ್ತು ಜಿಂದಾಲ್ ಸಮೂಹದ ಸೌತ್ವೆಸ್ಟ್ ಮೈನಿಂಗ್ ಕಂಪನಿ ನಡುವಣ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಸಲಹೆಗಾರ ಎಸ್.ಆರ್.ಹಿರೇಮಠ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ `ಸಿಇಸಿ~ ಶುಕ್ರವಾರ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಅರ್ಜಿದಾರರು ಮತ್ತು ಪ್ರತಿವಾದಿಗಳ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ `ಸಿಇಸಿ~, ರಾಜ್ಯ ಸರ್ಕಾರದಿಂದ ಮೂರು ಬಾರಿ ಉತ್ತರ ಪಡೆದುಕೊಂಡಿದೆ. ಈ ಹಿಂದೆ ನ್ಯಾಯಾಲಯ ನೀಡಿದ್ದ ಗಡುವಿನಂತೆ `ಸಿಇಸಿ~ ಶುಕ್ರವಾರ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸುವ ಸಂಭವ ಇದೆ. ಬೇಲೆಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅದಾನಿ ಎಂಟರ್ಪ್ರೈಸಸ್ ಮತ್ತು ಇತರರ ವಿರುದ್ಧ ಸಿಬಿಐಗೆ ತನಿಖೆಗೆ ಆದೇಶಿಸುವಂತೆ ಕೋರಿರುವ ಬಗ್ಗೆಯೂ ವರದಿ ಸಲ್ಲಿಕೆಯಾಗಬಹುದು ಎಂದು ತಿಳಿದುಬಂದಿದೆ.

ಗಣಿಗಾರಿಕೆ ನಿಷೇಧದ ಬಳಿಕ ಖಾಸಗಿ ಸ್ಟಾಕ್ಯಾರ್ಡ್ಗಳ ಪರವಾನಗಿಯನ್ನೂ ರದ್ದುಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ 48 ಸ್ಟಾಕ್ಯಾರ್ಡ್ಗಳಲ್ಲಿ 5.05 ಲಕ್ಷ ಟನ್ ಮತ್ತು ತುಮಕೂರು ಜಿಲ್ಲೆಯ ಕೆಲ ಸ್ಟಾಕ್ಯಾರ್ಡ್ಗಳಲ್ಲಿ 27,000 ಟನ್ ಅದಿರು ಸಾಗಣೆಯಾಗದೇ ಉಳಿದಿದೆ. ಈ ಅದಿರನ್ನು ವಶಕ್ಕೆ ಪಡೆಯದಂತೆ ಆದೇಶಿಸಬೇಕೆಂದು ಕೋರಿ ಸ್ಟಾಕ್ಯಾರ್ಡ್ಗಳ ಮಾಲೀಕರು ಸಿಇಸಿಗೆ ಮನವಿ ಸಲ್ಲಿಸಿದ್ದರು.

ಸ್ಟಾಕ್ಯಾರ್ಡ್ಗಳ ಮಾಲೀಕರ ಮನವಿಯನ್ನು ಪೂರ್ಣವಾಗಿ ತಿರಸ್ಕರಿಸಿರುವ ಸಿಇಸಿ, `ಒಟ್ಟು 5.32 ಲಕ್ಷ ಟನ್ ಅದಿರನ್ನು ತಕ್ಷಣವೇ ವಶಕ್ಕೆ ಪಡೆದು `ಇ-ಹರಾಜು~ ಮೂಲಕ ಮಾರಾಟ ಮಾಡಬೇಕು. ಉಸ್ತುವಾರಿ ಸಮಿತಿಯ ಮೂಲಕವೇ ಈ ಪ್ರಕ್ರಿಯೆ ನಡೆಯಬೇಕು. ಆ ಅದಿರು ಅಕ್ರಮ ಗಣಿಗಾರಿಕೆಯ ಮೂಲಕ ಸಂಗ್ರಹಿಸಿದ್ದಲ್ಲ ಎಂಬುದನ್ನು ಸ್ಟಾಕ್ಯಾರ್ಡ್ ಮಾಲೀಕರು ಸಾಬೀತುಪಡಿಸಿದಲ್ಲಿ ಅದರ ಮೌಲ್ಯ ಮರುಪಾವತಿಸುವ ಷರತ್ತಿನ ಮೇಲೆ ಹರಾಜು ಪ್ರಕ್ರಿಯೆ ನಡೆಸಬೇಕು~ ಎಂದು ಶಿಫಾರಸು ಮಾಡಿದೆ. ಬುಧವಾರ ಸಿಇಸಿ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ 9 ಪುಟಗಳ ವರದಿ `ಪ್ರಜಾವಾಣಿ~ಗೆ ಲಭ್ಯವಾಗಿದೆ. ಪರವಾನಗಿ ರದ್ದು ಮಾಡಲಾದ ಖಾಸಗಿ ಸ್ಟಾಕ್ಯಾರ್ಡ್ಗಳಲ್ಲಿ ದಾಸ್ತಾನು ಇರುವ ಅದಿರಿನ ಪ್ರಮಾಣದ ಪೂರ್ಣ ವಿವರವನ್ನು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಇಸಿಗೆ ಸಲ್ಲಿಸಿತ್ತು. ಈ ಎಲ್ಲ ವಿವರಗಳು ಮತ್ತು ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದೆ.

ಸ್ಥಗಿತಗೊಂಡಿರುವ ಗಣಿಗಳಲ್ಲಿ ಪೂರ್ವಸಿದ್ಧತಾ ಕಾರ್ಯಗಳು ಪೂರ್ಣಗೊಂಡ ಬಳಿಕವೇ ಗಣಿಗಾರಿಕೆ ಪುನರಾರಂಭಕ್ಕೆ ಅವಕಾಶ ಕಲ್ಪಿಸಬೇಕು. ಜಂಟಿ ಸರ್ವೆ ಸಮಿತಿಯ ಶಿಫಾರಸಿನಂತೆ ಮೊದಲು ಎಲ್ಲ ಗಣಿಗಳ ಗಡಿರೇಖೆಗಳನ್ನೂ ಗುರುತಿಸಿ, ತಂತಿಬೇಲಿ ಅಳವಡಿಸಬೇಕು. ಭಾರತೀಯ ಗಣಿ ನಿರ್ದೇಶನಾಲಯದ ನಿರ್ದೇಶನದ ಪ್ರಕಾರ ಗಣಿ ಯೋಜನೆ ಸಿದ್ಧಪಡಿಸಿ, ಪೂರಕ ವ್ಯವಸ್ಥೆ ಮಾಡಿಕೊಳ್ಳಬೇಕು. ಪರಿಹಾರ ಮತ್ತು ಪುನರ್ವಸತಿ ಸಮೀಕ್ಷೆ ಪೂರ್ಣಗೊಳಿಸಬೇಕು, ಪರಿಸರ ನಿರ್ವಹಣಾ ಯೋಜನೆಯನ್ನೂ ಸಿದ್ಧಪಡಿಸಬೇಕು. ಗಣಿಗಳನ್ನು ಸಂಪರ್ಕಿಸುವ ರಸ್ತೆ ದುರಸ್ತಿ, ತ್ಯಾಜ್ಯ ಸಂಗ್ರಹಕ್ಕೆ ಸ್ಥಳ ಗುರುತಿಸುವುದು, ಹೂಳು ಸಂಗ್ರಹಿಸಲು `ಚೆಕ್ ಡ್ಯಾಂ~ ನಿರ್ಮಾಣ, ಕಾನೂನಿನ ಪ್ರಕಾರ ಗಣಿ ಗುತ್ತಿಗೆಗಳ ನವೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ನೀಡಬೇಕು ಎಂದು ಸಿಇಸಿ ಶಿಫಾರಸು ಮಾಡಿದೆ

ಯಾವುದೇ ಅಕ್ರಮ ಗಣಿಗಾರಿಕೆ ನಡೆಸದ 20 ಗಣಿಗಳನ್ನು `ಎ~ ವರ್ಗದಲ್ಲಿ ಮತ್ತು ಸಣ್ಣ ಪ್ರಮಾಣದ ಅಕ್ರಮಗಳು ಪತ್ತೆಯಾಗಿರುವ 29 ಗಣಿಗಳನ್ನು `ಬಿ~ ವರ್ಗದಲ್ಲಿ ಹಿಂದಿನ ವರದಿಯಲ್ಲಿ ಗುರುತಿಸಲಾಗಿತ್ತು. ಸುಪ್ರೀಂಕೋರ್ಟ್ ನಿಗದಿಪಡಿಸಿರುವ ಮಾರ್ಗಸೂಚಿಯ ಆಧಾರದಲ್ಲಿ ಪರಿಹಾರ ಮತ್ತು ಪುನರ್ವಸತಿ ಯೋಜನೆ ಸಿದ್ಧಪಡಿಸಿದ ಬಳಿಕ `ಎ~ ವರ್ಗದ ಗಣಿಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಹುದು. ಪರಿಹಾರ ಮತ್ತು ಪುನರ್ವಸತಿ ಯೋಜನೆ ರೂಪಿಸುವುದರ ಜೊತೆಗೆ ಸಿಇಸಿ ಶಿಫಾರಸು ಮಾಡಿರುವ ಪ್ರಮಾಣದ ದಂಡವನ್ನು ಪಾವತಿಸಿದ ಬಳಿಕವೇ ಗಣಿಗಾರಿಕೆ ಆರಂಭಕ್ಕೆ ಒಪ್ಪಿಗೆ ನೀಡಬಹುದು ಎಂಬ ಶಿಫಾರಸು ಕೂಡ ಇದೆ. ಕರ್ನಾಟಕ-ಆಂಧ್ರಪ್ರದೇಶ ಅಂತರರಾಜ್ಯ ಗಡಿಯಲ್ಲಿ ಇರುವ ಏಳು `ಬಿ~ ದರ್ಜೆ ಗಣಿಗಳಲ್ಲಿ ಸದ್ಯಕ್ಕೆ ಗಣಿಗಾರಿಕೆಗೆ ಅವಕಾಶ ಇಲ್ಲ.

ಅಂತರರಾಜ್ಯ ಗಡಿ ಗುರುತಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಒಪ್ಪಿಗೆ ನೀಡಬೇಕು ಎಂಬ ಶಿಫಾರಸು ವರದಿಯಲ್ಲಿದೆ. ಸಿಇಸಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದು `ಎ~ ಮತ್ತು `ಬಿ~ ದರ್ಜೆ ಗಣಿಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಾಗ ಜುಲೈ ಸಮೀಪಿಸಬಹುದು ಎಂದು ಅಂದಾಜಿಸಲಾಗಿದೆ. ಗಣಿಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಯೋಜನೆ ಸಿದ್ಧಪಡಿಸುವ ಸಂಬಂಧ ಭಾರತೀಯ ಅರಣ್ಯ ಶಿಕ್ಷಣ ಮತ್ತು ಸಂಶೋಧನೆ ಮಂಡಳಿ ಕಠಿಣವಾದ ಮಾದರಿಗಳನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಧನಬಾದ್ನ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ನ ಸಹಯೋಗದಲ್ಲಿ ಪರಿಹಾರ ಮತ್ತು ಪುನರ್ವಸತಿ ಯೋಜನೆ ಸಿದ್ಧಪಡಿಸಲು ಅವಕಾಶ ನೀಡುವಂತೆ ಗಣಿ ಮಾಲೀಕರು ಮನವಿ ಮಾಡಿದ್ದರು. ಈ ಬೇಡಿಕೆಯನ್ನೂ ಸಿಇಸಿ ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.