ಮೈಸೂರು:  ತಾಳಿ, ಸೀರೆ, ಪಂಚೆ, ಅಂಗಿ, ಜೊತೆಗೊಂದಿಷ್ಟು ಉಡುಗೊರೆ ಹಣ ಸಿಗುತ್ತದೆ ಜೊತೆಗೆ ಉಚಿತವಾಗಿ ಮದುವೆಯೂ ಆಗುತ್ತದೆ ಎಂಬ ಕಾರಣಕ್ಕೆ ಇಲ್ಲೊಬ್ಬ ಅಣ್ಣನ ಪತ್ನಿಯನ್ನೇ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿ ಬಂದ ಘಟನೆಯೊಂದು ನಡೆದಿದೆ.

ಬೆಂಗಳೂರಿನ ಗುಟ್ಟಹಳ್ಳಿಯಲ್ಲಿ ಇತ್ತೀಚೆಗೆ ಮಹಾಕಾಳಮ್ಮ ದೇವಾಲಯದಲ್ಲಿ ಸಾಮೂಹಿಕ ವಿವಾಹ ನಡೆಯಿತು. ಅಲ್ಲಿ ಮೈಸೂರಿನ ಏಕಲವ್ಯ ನಗರದ 7 ಜೋಡಿಗಳು ವಿವಾಹವಾದವು. ಅದರಲ್ಲಿ ಅತ್ತಿಗೆಯನ್ನೇ ಮದುವೆಯಾದ ಭೂಪ ಕೂಡ ಸೇರಿದ್ದ.

ಈತನಿಗೆ ಈಗಾಗಲೇ ಮದುವೆಯಾಗಿದೆ. ಈತನ ಪತ್ನಿ ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈತನ ಅಣ್ಣ ಇತ್ತೀಚೆಗೆ ನಿಧನರಾಗಿದ್ದು ಅವರ ಪತ್ನಿಯನ್ನು ಈತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿ ಬಂದಿದ್ದಾನೆ.

ಮೈಸೂರಿನಿಂದ ಬೆಂಗಳೂರಿಗೆ ತೆರಳಿ ಮದುವೆಯಾಗಿ ಬಂದ ಇತರ 5 ಜೋಡಿಗಳಿಗೆ ಈಗಾಗಲೇ ಮದುವೆಯಾಗಿತ್ತು. ಅವರಿಗೆ ಪ್ರೌಢಶಾಲೆಗೆ ಹೋಗುವ ಮಕ್ಕಳೂ ಇದ್ದಾರೆ. ಈ ಪ್ರದೇಶದ ಮುಖಂಡರೊಬ್ಬರು ಇವರನ್ನೆಲ್ಲಾ ಕರೆದುಕೊಂಡು ಹೋಗಿ ಮದುವೆ ಮಾಡಿಸಿದ್ದರು. ಈ ಬಗ್ಗೆ ಏಕಲವ್ಯ ನಗರದ ಜನರು ಒಡನಾಡಿ ಸೇವಾ ಸಂಸ್ಥೆಗೆ ದೂರು ನೀಡಿ ಇಂತಹ ಅನೈತಿಕ ವ್ಯವಹಾರವನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

ಒಡನಾಡಿ ಸಂಸ್ಥೆಯ ತಂಡ ಮದುವೆ ನಡೆದ ಸ್ಥಳಕ್ಕೆ ಮತ್ತು ಏಕಲವ್ಯ ನಗರಕ್ಕೆ ಭೇಟಿ ನೀಡಿ ಸಾಮೂಹಿಕ ವಿವಾಹದಲ್ಲಿ ಮದುವೆಯಾದವರ ವಿವರ ಮತ್ತು ಛಾಯಾಚಿತ್ರಗಳನ್ನು ಸಂಗ್ರಹಿಸಿದೆ.

ರಾಜ್ಯದಲ್ಲಿ ಚುನಾವಣೆಯ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಸಾಮೂಹಿಕ ವಿವಾಹ ಕೂಡ ಮತ ಬೇಟೆಯ ಸರಕಾಗತೊಡಗಿದೆ. ಬಹಳಷ್ಟು ರಾಜಕಾರಣಿಗಳು ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸ ತೊಡಗಿದ್ದಾರೆ. ಸಾಮೂಹಿಕ ವಿವಾಹಕ್ಕೆ ಹುಟ್ಟು ಹಬ್ಬ ಮಾತ್ರ ನೆಪವಲ್ಲ. ಯಾವುದೋ ದೇವಾಲಯದ ವಾರ್ಷಿಕೋತ್ಸವ ಕೂಡ ಆಗಬಹುದು. ಸಂಘ ಸಂಸ್ಥೆಗಳ ವಾರ್ಷಿಕೋತ್ಸವ ಕೂಡ ಆಗಬಹುದು. ಇದು ನೈತಿಕ ಅಧಃಪತನವಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಒತ್ತಾಯಿಸುತ್ತಾರೆ.

ಸೀರೆ, ಪಂಚೆ, ಹಣದಾಸೆ: ಸಾಮೂಹಿಕ ವಿವಾಹದಲ್ಲಿ ವಧುವಿಗೆ ತಾಳಿ, ಸೀರೆ, ವರನಿಗೆ ಪಂಚೆ, ಅಂಗಿ, ಜೊತೆಗೆ ದಂಪತಿ ಉಡುಗೊರೆಯಾಗಿ ಒಂದಿಷ್ಟು ಹಣ ಸಲ್ಲುತ್ತದೆ. ಈ ಆಸೆಗಾಗಿ ಈಗಾಗಲೇ ಮದುವೆಯಾದ ದಂಪತಿಗಳು ಮತ್ತೊಮ್ಮೆ ಮದುವೆಯಾಗುವ ಹೊಸ ಸಂಪ್ರದಾಯ ಈಗ ಆರಂಭವಾಗಿದೆ. ಸಾಮೂಹಿಕ ವಿವಾಹಕ್ಕೆ ವಧು ವರರನ್ನು ಪೂರೈಸುವ ಏಜಂಟರೂ ಕೂಡ ಈಗ ಹುಟ್ಟಿಕೊಂಡಿದ್ದಾರೆ.

ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕಾರಣಿಗಳು ನಡೆಸುವ ಸಾಮೂಹಿಕ ವಿವಾಹಗಳನ್ನು ರದ್ದು ಮಾಡಬೇಕು. ಇಲ್ಲವೇ ಅಲ್ಲಿ ನಡೆಯುವ ವಿವಾಹಗಳನ್ನು ಅದೇ ದಿನವೇ ನೋಂದಣಿ ಮಾಡುವ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ಸಾಮೂಹಿಕ ವಿವಾಹವನ್ನೂ ಮತಬೇಟೆಯ ತಂತ್ರವನ್ನಾಗಿ ಬಳಸುವುದು ತಪ್ಪುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಮದುವೆ ಎನ್ನುವುದು ಅತ್ಯಂತ ವೈಯಕ್ತಿಕ ವಿಷಯ. ಅದನ್ನೂ ಕೂಡ ವ್ಯಾಪಾರ ಮಾಡಿಬಿಟ್ಟರೆ ಹೇಗೆ ಎಂದು ಅವರು ಪ್ರಶ್ನೆ ಮಾಡುತ್ತಾರೆ. ಸಾಮೂಹಿಕ ಮದುವೆ ಸಂದರ್ಭದಲ್ಲಿ ಸಾಕಷ್ಟು ಬಾಲ್ಯ ವಿವಾಹಗಳು ನಡೆಯುತ್ತಿದ್ದವು. ಈ ಬಗ್ಗೆ ಮಾಧ್ಯಮಗಳು ಪ್ರಚಾರ ನೀಡಿದ್ದರಿಂದ ಈಗ ಅದು ಕೊಂಚ ಕಡಿಮೆ ಆಗಿದೆ. ಆದರೆ ರಾಜಕಾರಣಿಗಳು ಮತ್ತು ಇತರ ಸಂಘ ಸಂಸ್ಥೆಗಳು ನಡೆಸುವ ಸಾಮೂಹಿಕ ವಿವಾಹಗಳನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲದೇ ಇರುವುದರಿಂದ ಅದನ್ನೂ ರಾಜಕೀಯ ಲಾಭಕ್ಕೆ ಬಳಸುವ ಯತ್ನ ನಡೆದಿದೆ ಎಂದು ಅವರು ಹೇಳುತ್ತಾರೆ.

ವಂಚನೆ: ಒಮ್ಮೆ ಮದುವೆಯಾದವರು ಮತ್ತೊಮ್ಮೆ ಯಾವುದೇ ಕಾರಣಕ್ಕೆ ಸುಳ್ಳು ಹೇಳಿ ತಾಳಿ ಮತ್ತು ಇತರ ಸೌಲಭ್ಯಗಳನ್ನು ಪಡೆದು ಮದುವೆಯಾದರೆ ಅವರ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಬಹುದು. ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಗಳು ಮಾತ್ರ ಸಾಮೂಹಿಕ ವಿವಾಹ ನಡೆಸಬೇಕು. ಪೂರ್ವಪರ ವಿಚಾರಿಸದೆ ಮದುವೆ ನಡೆಸುವುದು ತಪ್ಪು ಎಂದು ನ್ಯಾಯವಾದಿ ಸುಮನ ಅಭಿಪ್ರಾಯಪಡುತ್ತಾರೆ.

ಮದುವೆ ನೋಂದಣಿಗೆ ನೀಡಬೇಕಾದ ಎಲ್ಲ ದಾಖಲೆ ಪತ್ರಗಳನ್ನು ಸಾಮೂಹಿಕ ವಿವಾಹದ ಸಂದರ್ಭದಲ್ಲಿಯೂ ಪಡೆದುಕೊಂಡು ಮದುವೆ ಮಾಡಿಸುವ ವ್ಯವಸ್ಥೆ ಜಾರಿಗೊಳಿಸಬೇಕು. ರಾಜಕಾರಣಿಗಳು ನಡೆಸುವ ಸಾಮೂಹಿಕ ವಿವಾಹದ ಬಗ್ಗೆ ಸ್ವತಂತ್ರ ಸಂಸ್ಥೆಯೊಂದು ಕಣ್ಣಿಡುವ ವ್ಯವಸ್ಥೆ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸುತ್ತಾರೆ.

ಸಾಮೂಹಿಕ ಮಾರಾಟ: ಇದು ಸಾಮೂಹಿಕ ಮದುವೆಯಲ್ಲ. ಸಾಮೂಹಿಕ ಮಾರಾಟ. ಯಾರು ಬೇಕಾದರೂ ರಾಜಕೀಯ ಮಾಡಬಹುದು. ಏನು ಬೇಕಾದರೂ ಮಾಡಬಹುದು ಎನ್ನುವ ವಾತಾವರಣ ಸೃಷ್ಟಿಯಾಗಿದೆ ಎಂದು ಮಹಿಳಾಪರ ಹೋರಾಟಗಾರ್ತಿ ಮೀರಾ ನಾಯಕ್ ವ್ಯಥೆ ಪಡುತ್ತಾರೆ.

ಸಾಮೂಹಿಕ ವಿವಾಹದಲ್ಲಿ ಬಾಲ್ಯ ವಿವಾಹ ಆಗಬಹುದು. ದಾರಿ ಬದಿಯಲ್ಲಿ ಹೋಗುವ ಯಾರು ಬೇಕಾದರೂ ಮದುವೆಯಾಗಬಹುದು. ಮಾನವ ಸಾಗಣೆ ಕೂಡ ಆಗಬಹುದು. ಇದನ್ನೆಲ್ಲಾ ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂದೂ ಅವರು ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.