ಶಿವಮೊಗ್ಗ: ಸಮೀಪದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಆರು ತಿಂಗಳ ಹಿಂದೆ ಜನಿಸಿದ ಬಹು ಅಪರೂಪದ ಕಪ್ಪು ಬಣ್ಣದ ಚಿರತೆ ಮರಿಯನ್ನು ಸಾರ್ವಜನಿಕರ ವೀಕ್ಷಣೆಗೆ ಭಾನುವಾರ ಬಿಡಲಾಯಿತು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ ತ್ಯಾವರೆಕೊಪ್ಪದ ಹುಲಿ- ಸಿಂಹಧಾಮದಲ್ಲಿರುವ ಚಿರತೆ ಸಾಕಾಣಿಕೆ ಮನೆಯಿಂದ ಕಪ್ಪು ಬಣ್ಣದ ಈ ಹೆಣ್ಣು ಮರಿಯನ್ನು ಚಿರತೆ ಪ್ರದರ್ಶನ ಆವರಣಕ್ಕೆ ಬಿಡುಗಡೆ ಮಾಡಿದರು.

ಸಿಂಹ ಧಾಮದಲ್ಲಿ `ಕೃತಿಕಾ~ ಎಂಬ ಹೆಸರಿನ ಚಿರತೆಯು ಈ ಕಪ್ಪು ಮರಿಗೆ ಜನ್ಮ ನೀಡಿತ್ತು.
ಕಾರ್ಯಕ್ರಮದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜುಂಡಸ್ವಾಮಿ, ರಾಜ್ಯದ ಮೃಗಾಲಯಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ತ್ಯಾವರೆಕೊಪ್ಪದ ಹುಲಿ- ಸಿಂಹಧಾಮಲ್ಲಿ ಚಿರತೆಯೊಂದು ಕಪ್ಪು ಬಣ್ಣದ ಮರಿಗೆ ಜನ್ಮ ನೀಡಿದೆ. ರಾಜ್ಯದಲ್ಲಿ ಬನ್ನೇರುಘಟ್ಟ ಹಾಗೂ ತ್ಯಾವರೆಕೊಪ್ಪದಲ್ಲಿ ಮಾತ್ರ ಸಫಾರಿಗಳಿವೆ ಎಂದು ಮಾಹಿತಿ ನೀಡಿದರು.

ತ್ಯಾವರೆಕೊಪ್ಪದ ಸಿಂಹಧಾಮವನ್ನು ಇನ್ನಷ್ಟು ಆಕರ್ಷಿಸಲು ಮೈಸೂರು ಮೃಗಾಲಯದಿಂದ 117 ವಿವಿಧ ಪಕ್ಷಿಗಳನ್ನು ತರಿಸಲಾಗಿದೆ. ತಮಿಳುನಾಡಿನಿಂದ 2 `ಎಮು~ ಪಕ್ಷಿಗಳನ್ನು ತರಲಾಗಿದೆ. ಸಫಾರಿಗಾಗಿ ಒಂದು ಹೊಸ ವಾಹನ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.