ಬೆಂಗಳೂರು: ವಿಕೃತಕಾಮಿ ಉಮೇಶ್ ರೆಡ್ಡಿಗೆ ಸುಪ್ರೀಂಕೋರ್ಟ್ ನೀಡಿರುವ ಗಲ್ಲುಶಿಕ್ಷೆಯಿಂದ ಮುಕ್ತಿಗೊಳಿಸುವಂತೆ ಕೋರಿ ಆತನ ತಾಯಿ ಗೌರಮ್ಮ ರಾಷ್ಟ್ರಪತಿಗಳಿಗೆ ಕ್ಷಮಾದಾನ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಮಂಗಳವಾರ ಅವರು ರಾಷ್ಟ್ರಪತಿಯವರಿಗೆ ನೀಡಲಿದ್ದಾರೆ.

ತಮ್ಮ ಮಗನಿಗೆ ಕೇವಲ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದು ಕಾನೂನಿನ ಅಡಿ ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ತಮ್ಮ ಪುತ್ರ ಮಾನಸಿಕ ರೋಗಿಯಾಗಿದ್ದಾನೆ. ವೈದ್ಯರು ನೀಡಿರುವ ವರದಿಯಲ್ಲಿಯೂ ಆತ ಅತ್ಯಾಚಾರದಂತಹ ಕೃತ್ಯ ಎಸಗಲು ಶಕ್ತನಲ್ಲ ಎಂದು ತಿಳಿಸಲಾಗಿದೆ. ಆದರೆ ಆತನ ಮಾನಸಿಕ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಪೊಲೀಸರು ಸುಲಭದಲ್ಲಿ ‘ಬಲಿಪಶು’ ಮಾಡಿದ್ದಾರೆ ಎನ್ನುವುದು ಗೌರಮ್ಮ ಅವರ ದೂರು.

ರೆಡ್ಡಿ, ಚಿತ್ರದುರ್ಗ ಜಿಲ್ಲೆಯ ಹಿರಿೂರಿನ ಬಸಪ್ಪನ ಮಾಳಿಗೆಯ ನಿವಾಸಿ. ನಗರದ ಜಯಶ್ರಿ ಅವರ ಮೇಲೆ 1998ರ ಫೆ.28ರಂದು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಹೈಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಇದನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.