ವಿಜಾಪುರ: ವಿಜಾಪುರ ಜಿಲ್ಲೆ ಭಾನುವಾರ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಸೂಫಿ ಸಂತರು-ಶರಣರ ನಾಡಿಗೆ ರಾಜ್ಯದ ವಿವಿಧೆಡೆಯ ಸಾವಿರಕ್ಕೂ ಹೆಚ್ಚು ಮಠಾಧೀಶರು ಆಗಮಿಸಿದ್ದರು. ಪಟ್ಟಣದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿಸಲಾಯಿತು! ಐದು ಹೆಲಿಕಾಪ್ಟರ್‌ಗಳು ಹಾರಾಡಿದವು.

ಅಖಿಲ ಕರ್ನಾಟಕ ಅಶೋಕ ಖೇಣಿ ಯೂತ್ ಮೂವ್‌ಮೆಂಟ್‌ನಿಂದ ಇಲ್ಲಿ ಹಮ್ಮಿಕೊಂಡಿದ್ದ ವರ್ಣರಂಜಿತ ಸಮಾರಂಭದಲ್ಲಿ ನೈಸ್ ಸಂಸ್ಥೆಯ ಮುಖ್ಯಸ್ಥ, ಉದ್ಯಮಿ ಅಶೋಕ ಖೇಣಿ ತಮ್ಮ 62ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇದರ ಜೊತೆಗೆ 162 ಜೋಡಿಗಳ ಸಾಮೂಹಿಕ ವಿವಾಹ, ಸರ್ವಧರ್ಮ ಸಮ್ಮೇಳನ ಸಹ ನಡೆಯಿತು.

ವಿಶಾಲವಾದ ವೇದಿಕೆಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ವೇದಿಕೆಯ ಮೇಲೆ 62 ಜ್ಯೋತಿಗಳನ್ನು ಬೆಳಗಿಸಿ ಖೇಣಿ ಹುಟ್ಟು ಹಬ್ಬ ಆಚರಿಸಲಾಯಿತು. ಹೆಲಿಕಾಪ್ಟರ್ ಮೂಲಕ ವೇದಿಕೆಯ ಮೇಲೆ ಪುಷ್ಪವೃಷ್ಟಿ ನಡೆಯಿತು.

`ಅಶೋಕ ಖೇಣಿ ತತ್ವ-ಕಾಯಕ ನಿಷ್ಠ ವ್ಯಕ್ತಿ~ ಎಂದು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ `ಖೇಣಿ ಕರ್ನಾಟಕದ ಅಭಿವೃದ್ಧಿಯ ಏಣಿ~ ಎಂದು ಪೇಜಾವರ ಮಠದ ವಿಶ್ವೇಶ್‌ತೀರ್ಥ ಸ್ವಾಮೀಜಿ ಶ್ಲಾಘಿಸಿದರು. ನಟರಾದ ಅಂಬರೀಷ್, ಸುದೀಪ್, ಹಿನ್ನೆಲೆ ಗಾಯಕ ಸೋನು ನಿಗಮ್, ಸಚಿವ ಮುರುಗೇಶ ನಿರಾಣಿ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಬಿ. ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಡಾ.ಎಸ್.ಎಸ್. ಬಗಲಿ, ವಿಠ್ಠಲ ಕಟಕಧೋಂಡ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.