ಕುಮಟಾ (ಉತ್ತರ ಕನ್ನಡ ಜಿಲ್ಲೆ): ಇಲ್ಲಿಯ ಮಹಾತ್ಮ ಗಾಂಧಿ ಮೈದಾನದಲ್ಲಿ ಭಾನುವಾರ ಆರಂಭವಾದ ‘ಗೋವು ಉತ್ಸವ’ದಲ್ಲಿ 30ಕ್ಕೂ ಹೆಚ್ಚು ದೇಸಿ ತಳಿಗಳು ಗಮನ ಸೆಳೆದವು.

ಗೋವಿನ ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು, ‘ತಾಯಿಯ ಹಾಲೇ ಮಗುವಿಗೆ ಸರಿಯಾಗಿ ಸಿಗದಿರುವ ಇಂದಿನ ಸಂಸರ್ಭದಲ್ಲಿ ಗೋವು ಎಲ್ಲ ರೀತಿಯಿಂದ ತಾಯಿಯ ಕೆಲಸ ಮಾಡುತ್ತಿದೆ. ಗೋವುಗಳಿಂದ ಉಪಕೃತನಾದ ಮನುಷ್ಯ ಅವುಗಳನ್ನು ರಕ್ಷಿಸಬೇಕು’ ಎಂದರು.

‘ಹಾಲು ಕೊಡುವುದನ್ನು ನಿಲ್ಲಿಸಿದ ನಂತರ ಗೋವುಗಳನ್ನು ಕಸಾಯಿಖಾನೆಗೆ ನೀಡುವ ಬದಲು ಅವುಗಳನ್ನು ಸಾಕಿ ರಕ್ಷಿಸಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದೇ ಈ ಉತ್ಸವದ ಉದ್ದೇಶ’ ಎಂದು ಸ್ವಾಮೀಜಿ ವಿವರಿಸಿದರು.

ಈ ಉತ್ಸವ ಇದೇ 19ರ ವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.