ಬೆಳಗಾವಿ: ಸಾಹಿತಿಗಳಾದ ಡಾ. ಗೀತಾ ನಾಗಭೂಷಣ ಮತ್ತು ಡಾ. ಭಾಲಚಂದ್ರ ನೇಮಾಡಿ ಅವರಿಗೆ 2014ನೇ ಸಾಲಿನ ಬಸವರಾಜ ಕಟ್ಟಿಮನಿ ರಾಷ್ಟ್ರೀಯ ಕಾದಂಬರಿ ಪ್ರಶಸ್ತಿಯನ್ನು ಭಾನುವಾರ ಇಲ್ಲಿ ನೀಡಿ ಗೌರವಿಸಲಾಯಿತು. ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಈ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪ್ರಶಸ್ತಿಯು ತಲಾ ₨ 50,000 ನಗದು ಹಾಗೂ ಫಲಕ ಒಳಗೊಂಡಿದೆ.

‘ಇಂದು ಬಸವರಾಜ ಕಟ್ಟಿಮನಿ ಪ್ರತಿಷ್ಠಾನವು ಕನ್ನಡ ಮತ್ತು ಮರಾಠಿ ಸಾಹಿತಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ಗಡಿಯಲ್ಲಿ ಕನ್ನಡ– ಮರಾಠಿ ಬಾಂಧವ್ಯ ಬೆಸೆಯಲು ವೇದಿಕೆ ಕಲ್ಪಿಸಿದೆ’ ಎಂದು ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹೇಳಿದರು.

‘ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾದ ಡಾ. ಗೀತಾ ನಾಗಭೂಷಣ ಮತ್ತು ಡಾ. ಭಾಲಚಂದ್ರ ನೇಮಾಡಿ ಅವರು ಅತ್ಯುತ್ತಮ ಲೇಖಕರು ಎಂಬುದರಲ್ಲಿ ಎರಡು ಮಾತಿಲ್ಲ’ ಎಂದು ಶ್ಲಾಘಿಸಿದರು. ಡಾ. ಗೀತಾ ನಾಗಭೂಷಣ ಅವರು, ‘ಇಂದಿನ ದಿನಗಳಲ್ಲಿ ಕೆಲವು ಸಾಹಿತಿಗಳು ರಾಜಕಾರಣದತ್ತ ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಪ್ರಶಸ್ತಿ, ಸೌಕರ್ಯಗಳಿಗಾಗಿ ವಿಧಾನಸೌಧದ ಸುತ್ತ ಅಲೆಯುತ್ತಿದ್ದು, ಪ್ರಶಸ್ತಿಗಾಗಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.