ಹೊಸಪೇಟೆ: ನಗರದ ಹೊರವಲಯದ ಜೋಳದರಾಶಿ ಗುಡ್ಡಕ್ಕೆ ಶುಕ್ರವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ನೂರಾರು ಗಿಡ–ಮರಗಳು ಸುಟ್ಟು ಹೋಗಿವೆ.

ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೊತ್ತಿಕೊಂಡಿದ್ದ ಬೆಂಕಿ, ರಾತ್ರಿ ಎಂಟೂವರೆ ವರೆಗೂ ಉರಿಯುತ್ತಿತ್ತು. ಗುಡ್ಡದ ಕೆಳಭಾಗದಲ್ಲಿ ಹೊತ್ತಿಕೊಂಡಿದ್ದ ಬೆಂಕಿ ನಂತರ ಇತರ ಕಡೆಗಳಿಗೂ ವ್ಯಾಪಿಸಿ, ಎಲ್ಲೆಡೆ ದಟ್ಟ ಹೊಗೆ ಆವರಿಸಿತ್ತು.

‘ಹೋಳಿ ಹಬ್ಬ ಇದ್ದುದರಿಂದ, ಯಾರೋ ಕೆಲವರು ಮದ್ಯಪಾನ ಮಾಡಿ ನಶೆಯಲ್ಲಿ ಸಿಗರೇಟ್ ಸೇದಿ ಬಿಸಾಕಿರಬಹುದು. ಇದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಈ ಹಿಂದೆಯೂ ಈ ರೀತಿಯ ಘಟನೆಗಳು ನಡೆದಿದ್ದವು. ಬೆಂಕಿ ನಂದಿಸುವ ಕೆಲಸ ನಡೆದಿದೆ’ ಎಂದು ತಹಶೀಲ್ದಾರ್ ಎಚ್. ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಟ್ಟು 232 ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಗಿಡ, ಮರಗಳಿವೆ. ಬಿಸಿಲಿನಿಂದ ಎಲ್ಲವೂ ಒಣಗಿ ಹೋಗಿದ್ದವು. ಹೀಗಾಗಿ ಬೆಂಕಿ ಬೇಗನೇ ಎಲ್ಲೆಡೆ ವ್ಯಾಪಿಸಿದೆ. ಕತ್ತಲಾಗಿರುವುದರಿಂದ ಎಷ್ಟು ಮರಗಳು ಸುಟ್ಟು ಹೋಗಿವೆ ಗೊತ್ತಾಗುತ್ತಿಲ್ಲ. ಬೆಳಿಗ್ಗೆಯಷ್ಟೇ ಇದರ ಬಗ್ಗೆ ನಿಖರವಾಗಿ ತಿಳಿಯಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.