ಸಿಂಗಪುರ: ಮೂಲತಃ ಚನ್ನಪಟ್ಟಣದ ಹಿರಿಯ ಪತ್ರಕರ್ತ, ಲೇಖಕ ಟಿ.ಎಸ್. ಸಂಜೀವರಾವ್ (92) ಇದೇ 17ರಂದು ಇಲ್ಲಿ ನಿಧನ ಹೊಂದಿದರು.

ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಆನರ್ಸ್ ಪದವೀಧರರಾಗಿದ್ದ ಅವರು, 1947ರಲ್ಲಿ ಮುಂಬೈಗೆ ಆಗಮಿಸಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಹಲವು ಪತ್ರಿಕೆಗಳಲ್ಲಿ ದುಡಿದ ಅವರು 1968ರಲ್ಲಿ ಕರ್ನಾಟಕಕ್ಕೆ ಹಿಂದಿರುಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಅನೇಕ ಪತ್ರಿಕೆಗಳಿಗೆ ವರದಿಗಾರರಾಗಿದ್ದ ಅವರು, ಪಾ.ವೆಂ. ಆಚಾರ್ಯ ನೇತೃತ್ವದ `ಕಸ್ತೂರಿ~ ಮಾಸ ಪತ್ರಿಕೆಯಲ್ಲೂ ಕೆಲಸ ಮಾಡಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ `ಮೂಕಜ್ಜಿಯ ಕನಸುಗಳು~ ಕೃತಿಇಂಗ್ಲಿಷ್‌ಗೆ ಭಾಷಾಂತರಿಸಿದ್ದರು. `ನಮ್ಮೂರು-ನಮ್ಮವರು~, `ತ್ರಿವೇಣಿ ಸಂಗಮ~, `ಹೆಣ್ಣು ಹೃದಯ ಮತ್ತು ಇತರ ಕಥೆಗಳು~, `ಚಿನ್ನದ ಇಲಿ~, ಈ ಭಾರತ ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದಾರೆ.
ಇಂಗ್ಲಿಷ್‌ನಲ್ಲೂ ಪ್ರಭುತ್ವ ಹೊಂದಿದ್ದ ಅವರು ಕೆಲವು ಕೃತಿಗಳನ್ನು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.