ಬೆಂಗಳೂರು: ಮಾತಿನ ಮಂಟಪ ಎಂದೇ ಖ್ಯಾತಿ ಪಡೆದಿರುವ ಸಂಸತ್ನಲ್ಲಿ ಚರ್ಚೆ ನಡೆಸಲು ಸದಸ್ಯರಿಗೆ ಹಲವು ರೀತಿಯ ಅವಕಾಶಗಳಿವೆ. ಆದರೆ, 15 ನೇ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಹೊರತುಪಡಿಸಿ ವಿವಿಧ ನಿಯಮಗಳ ಅಡಿಯಲ್ಲಿ ಚರ್ಚೆ ನಡೆಸಲು ಸದಸ್ಯರು ಆಸಕ್ತಿ ತೋರಿದ್ದು ತೀರ ಕಡಿಮೆ.

ಬೆಂಗಳೂರಿನ ರಿಜೋರ್ಸ್ ಸಂಶೋಧನಾ ಪ್ರತಿಷ್ಠಾನ (ಆರ್ಆರ್ಎಫ್) 15ನೇ ಲೋಕಸಭೆ ಅವಧಿಯಲ್ಲಿ ವಿವಿಧ ನಿಯಮಗಳ ಅಡಿಯಲ್ಲಿ ನಡೆದ ಚರ್ಚೆಗಳ ಕುರಿತು ನಡೆಸಿದ ವಿಸ್ತೃತವಾದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಸದನದ ಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆಗೆ ಒಪ್ಪಿಗೆ ಪಡೆಯುವುದು ಸಹ ಕಷ್ಟಸಾಧ್ಯವಾಗುವುದರಿಂದ ಸದಸ್ಯರು ತಮಗೆ ದೊರೆಯುವ ವಿವಿಧ ನಿಯಮಗಳ ಅಡಿ ದೊರೆಯುವ ಈ ಅವಕಾಶಗಳನ್ನು ವಿರಳವಾಗಿ ಬಳಸಿಕೊಳ್ಳುತ್ತಾರೆ. ಜತೆಗೆ ಅತ್ಯುತ್ತಮವಾದ ಭಾಷಣ ಸಹ ಮಾಧ್ಯಮಗಳಲ್ಲಿ ಪ್ರಕಟವಾಗುವುದು ಕಡಿಮೆ. ಇದಕ್ಕಿಂತ ಸದನದ ಕಲಾಪವನ್ನು ಅಡ್ಡಿಪಡಿಸಿ ಪ್ರಚಾರ ಪಡೆಯುವುದು ಹೆಚ್ಚು ಸುಲಭ. ಮಾಧ್ಯಮಗಳು ಇದೇ ರೀತಿಯ ಘಟನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಸದಸ್ಯರು ಸಹ ‘ಹೀರೊ’ಗಳಾಗಿ ಮಿಂಚಲು ಹೆಚ್ಚು ಆಸಕ್ತಿ ವಹಿಸುತ್ತಾರೆ ಎಂದು ವಿಶ್ಲೇಷಿಸಲಾಗಿದೆ.

ಇದರಿಂದ ಲೋಕಸಭೆಯಲ್ಲಿ ಚರ್ಚೆಯ ಗುಣಮಟ್ಟ ಕುಸಿಯುತ್ತಿದೆ. ಗೊತ್ತುವಳಿಗೂ ಸಹ ಸದಸ್ಯರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. 15ನೇ ಲೋಕಸಭೆಯಲ್ಲಿ 2012ರ ನ. 22ರಂದು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಯಾವುದೇ ರೀತಿ ಬೆಂಬಲ ದೊರೆಯಲಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷದ ಸುದೀಪ್ ಬಂದೊೋಪಾಧ್ಯಾಯ ಅವರು ಮಂಡಿಸಿದ್ದ ಗೊತ್ತುವಳಿಗೆ ವಿರೋಧ ಪಕ್ಷಗಳ 50 ಸದಸ್ಯರು ಸಹ ಬೆಂಬಲ ನೀಡಲಿಲ್ಲ.

ಅವಿಶ್ವಾಸ ಗೊತ್ತುವಳಿ ಮಂಡನೆಯಾಗುವ ಮಾತಿರಲಿ, ಮಂಡನೆಗೆ ಅಗತ್ಯವಾದ ಕನಿಷ್ಠ ಬೆಂಬಲವನ್ನೂ ಪಡೆದುಕೊಳ್ಳುವಲ್ಲಿ ತೃಣಮೂಲ ವಿಫಲವಾಯಿತು. ಇದರಿಂದ ಈ ಗೊತ್ತುವಳಿ ಚರ್ಚೆಗೆ ಬರಲೇ ಇಲ್ಲ. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ವಿರೋಧಿಸಿ ಸುದೀಪ್ ಅವರು ಗೊತ್ತುವಳಿ ಮಂಡಿಸಿದ್ದರು. ಪಶ್ಚಿಮ ಬಂಗಾಳದ ರಾಜಕೀಯವೇ ಪ್ರಮುಖವಾಗಿದ್ದು ಸಹ ಇದಕ್ಕೆ ಕಾರಣವಾಗಿತ್ತೇ ಹೊರತು ಸರ್ಕಾರವನ್ನು ಉರುಳಿಸುವ ಉದ್ದೇಶ ಇದರ ಹಿಂದೆ ಇರಲಿಲ್ಲ. ಆದರೆ, ಹಿಂದಿನ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಇಡೀ ದೇಶದ ಗಮನಸೆಳೆದಿತ್ತು.

ಈ ಪರಿಸ್ಥಿತಿಯನ್ನು ಬದಲಾಯಿಸುವ ಬಗ್ಗೆ ರಾಜಕೀಯ ಪಕ್ಷಗಳ ಸಂಸದೀಯ ಘಟಕಗಳು ವಿಶ್ಲೇಷಣೆ ನಡೆಸಬೇಕಾಗಿದೆ. ರಾಜಕೀಯ ಪಕ್ಷಗಳ ನಾಯಕರು ನಿರ್ದಿಷ್ಟ ವಿಷಯಗಳನ್ನು ಗುರುತಿಸಿ ಚರ್ಚೆಯ ಬಗ್ಗೆ ಗಂಭೀರ ಚಿಂತನೆ ನಡೆಸಿ ಯೋಜನೆ ರೂಪಿಸಿದರೆ ಲೋಕಸಭೆಯ ಕಾರ್ಯಕಲಾಪಗಳು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ಅಲ್ಪಾವಧಿ ಚರ್ಚೆ(ನಿಯಮ 193): ಕಳೆದ 5 ವರ್ಷಗಳಲ್ಲಿ ಈ ನಿಯಮದಡಿ ಸದಸ್ಯರು 60 ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಪ್ರಮುಖವಾಗಿ ನೈಸರ್ಗಿಕ ವಿಕೋಪಗಳು, ಶ್ರೀಲಂಕಾದಲ್ಲಿ ತಮಿಳರ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ, ಏಕರೂಪ ಶಿಕ್ಷಣ ಪದ್ಧತಿ, ಕೇಂದ್ರ–ರಾಜ್ಯ ಸಂಬಂಧಗಳು, ಆಂತರಿಕ ಭದ್ರತೆ ವಿಷಯಗಳು ಚರ್ಚೆಯಾಗಿವೆ.

ನಿಲುವಳಿ ಸೂಚನೆ: ಗಂಭೀರ ಪರಿಣಾಮ ಬೀರುವ ಸಾರ್ವಜನಿಕ ಮಹತ್ವದ ವಿಷಯಗಳನ್ನು ನಿಲುವಳಿ ಸೂಚನೆ ಮೂಲಕ ಮಂಡಿಸಿ ಸದನದ ಗಮನಸೆಳೆಯಲು ಸದಸ್ಯರಿಗೆ ಅವಕಾಶವಿದೆ.

ಅಸ್ಸಾಂನಲ್ಲಿ ನುಸುಳುವಿಕೆ ಮತ್ತು ವಿದೇಶಿ ಬ್ಯಾಂಕ್ಗಳಲ್ಲಿ ಕಪ್ಪು ಹಣ ಕುರಿತು ಎಲ್.ಕೆ. ಅಡ್ವಾಣಿ ಅವರು ನಿಲುವಳಿ ಸೂಚನೆ ಮಂಡಿಸಿದ್ದರು. ಸಿಪಿಐಎಂನ ಬಸುದೇವ್ ಆಚಾರ್ಯ ಸಹ ಕಪ್ಪು ಹಣದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ್ದರು. ಬಿಜೆಪಿಯ ಯೋಗಿ ಆದಿತ್ಯನಾಥ್ ಅವರಿಗೆ ಅಸ್ಸಾಂನಲ್ಲಿ ನುಸುಳುವಿಕೆ ಕುರಿತು ಚರ್ಚಿಸಲು ಅವಕಾಶ ದೊರೆಯಿತು. ಆದರೆ, ತಮ್ಮ ಪರವಾಗಿ ಎಲ್.ಕೆ. ಅಡ್ವಾಣಿ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಅವರು ಸದನವನ್ನು ಕೋರಿದ್ದರು.

ಗಮನ ಸೆಳೆಯುವ ಸೂಚನೆ(ನಿಯಮ 197): ಈ ನಿಯಮದಡಿ ತಮಿಳುನಾಡಿನಲ್ಲಿನ ತೆಂಗು ಬೆಳೆಗಾರರ ಪರಿಸ್ಥಿತಿ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಮಲೇಷ್ಯಾದ ಬಹುರಾಷ್ಟ್ರೀಯ ಕಂಪೆನಿ ಹೋಟೆಲ್ ಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ 15ನೇ ಲೋಕಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಈ ಬಾರಿಯ ಲೋಕಸಭೆಯಲ್ಲಿ 16,350 ಗಮನ ಸೆಳೆಯುವ ಸೂಚನೆ ಮಂಡಿಸಲು ಸಾಧ್ಯವಿತ್ತು. ಆದರೆ, ಸದಸ್ಯರು ಕೇವಲ ಶೇಕಡ 0.226ರಷ್ಟು ಮಾತ್ರ ಬಳಸಿಕೊಂಡಿದ್ದಾರೆ. ಈ ನಿಯಮವನ್ನು ಬಳಸಿಕೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸದನದ ಗಮನಕ್ಕೆ ತಾರದಿರುವುದು ಆಶ್ಚರ್ಯಕರವಾಗಿದೆ.

ನಿಯಮ 184ರ ಅಡಿಯಲ್ಲಿ: ಈ ನಿಯಮದ ಅಡಿ ಗೊತ್ತುವಳಿ ಮಂಡಿಸುವ ಸದಸ್ಯರಿಗೆ ಸಮಗ್ರವಾಗಿ ವಿಷಯ ಮಂಡಿಸಲು ಅವಕಾಶವಿದೆ. ಚರ್ಚೆಯ ಅಂತ್ಯದಲ್ಲೂ ಈ ಸದಸ್ಯರಿಗೆ ಮಾತನಾಡಲು ಅವಕಾಶ ದೊರೆಯುತ್ತದೆ. ಸಂಸತ್ತಿನ ಆರಂಭದ ಅಧಿವೇಶನಗಳಲ್ಲಿ ಈ ನಿಯಮ ಪ್ರಾಮುಖ್ಯತೆ ಪಡೆದಿತ್ತು. ವಿರೋಧ ಪಕ್ಷಗಳು ಈ ನಿಯಮದ ಮೂಲಕ ವಿಷಯಗಳನ್ನು ಮಂಡಿಸುತ್ತಿದ್ದರಿಂದ ಕಲಾಪಕ್ಕೆ ಅಡ್ಡಿಪಡಿಸುವ ಪ್ರಸಂಗ ಉದ್ಭವಿಸುತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ನಿಯಮದ ಅಡಿ ಗೊತ್ತುವಳಿ ಮಂಡಿಸುವುದು ಕಡಿಮೆಯಾಗುತ್ತಿದೆ. ಈ ಲೋಕಸಭೆಯಲ್ಲಿ ಒಂದು ಬಾರಿ ಮಾತ್ರ ಈ ನಿಯಮದ ಅಡಿ ಚರ್ಚಿಸಲಾಗಿದೆ.

191 ಮತ್ತು 342 ಅಡಿಯಲ್ಲಿ : ಈ ನಿಯಮದ ಅಡಿಯಲ್ಲಿ ಸರ್ಕಾರದ ನೀತಿ ಅಥವಾ ಇತರೆ ವಿಷಯಗಳ ಬಗ್ಗೆ ಪ್ರಸ್ತಾಪಿಸಬಹುದು. 15ನೇ ಲೋಕಸಭೆಯಲ್ಲಿ ಆರು ವಿಷಯಗಳು ಈ ನಿಯಮದ ಅಡಿ ಚರ್ಚಿಸಲಾಗಿದೆ.

ಅಶಿಸ್ತು ಮತ್ತು ಪುಂಡಾಟಿಕೆಯ ಕಾರಣಕ್ಕೆ ಸದನದಿಂದ ಸದಸ್ಯರ ಅಮಾನತು, ಬೆಲೆ ಏರಿಕೆ, ಕಲಾಪಕ್ಕೆ ಸಂಬಂಧಿಸಿದಂತೆ 331 ಜಿ ನಿಯಮ ಅಮಾನತು, ಜಂಟಿ ಸದನ ಸಮಿತಿ ನೇಮಕ, ಆರ್ಥಿಕತೆ ಮೇಲೆ ಪರಿಣಾಮ ಬೀರಿದ ಹಣದುಬ್ಬರ ಮತ್ತು ಜನಸಾಮಾನ್ಯರ ಮೇಲೆ ಬೀರಿರುವ ಪ್ರತಿಕೂಲ ಪರಿಣಾಮ, ದೇಶದಲ್ಲಿ ಜನಸಂಖ್ಯೆ ಸ್ಥಿರತೆ ಕುರಿತ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.