ಮಂಗಳೂರು: ದೇಶದ ರಕ್ಷಣೆಯ ದೃಷ್ಟಿಯಿಂದ ಪ್ರತಿ ಹಿಂದೂ ವ್ಯಕ್ತಿಯೂ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಬೇಕು ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ದುರ್ಗಾಸೇನೆ ವತಿಯಿಂದ ನಡೆದ ‘ಮಾತೃ ಪೂಜಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ ಆಯುಧವೆಂದರೆ, ಪೆನ್ನು, ಪುಸ್ತಕ ಅಥವಾ ವಾಹನಗಳಲ್ಲ. ಕತ್ತಿ, ತಲ್ವಾರ್‌ಗಳನ್ನು ಆಯುಧ ಎನ್ನುತ್ತಾರೆ. ದೇಶದ ರಕ್ಷಣೆಗಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಕತ್ತಿ– ತಲ್ವಾರ್ ಇಟ್ಟುಕೊಳ್ಳಬೇಕು. ಯಾವುದೇ ಸಂದಿಗ್ಧ ಪರಿಸ್ಥಿತಿ ಎದುರಾದರೂ ಮಹಿಳೆಯರು ದುರ್ಗಾ ಮಾತೆಯಾಗಿ ಎದ್ದು ನಿಲ್ಲಬೇಕು’ ಎಂದು ಹೇಳಿದರು.

ಶ್ರೀರಾಮ ದೇವರು ಹುಟ್ಟಿದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಒಂದು ಮಂದಿರವನ್ನು ನಮಗೆ ಕಟ್ಟಲಾಗದೇ ಇದ್ದರೂ, ಮುಸ್ಲಿಮರಿಗೆ ನೂರಾರು ಮಸೀದಿಗಳನ್ನು ಕಟ್ಟಲು ಅವಕಾಶ ಮಾಡಿಕೊಡಲಾಗುತ್ತಿರುವುದು ವಿಷಾದನೀಯ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.