ಲಾಹೋರ್: ಗುಪ್ತಚರ ಇಲಾಖೆ ಕಟ್ಟಡ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಸೇನಾ ಮೂಲ ಸೌಕರ್ಯಗಳ ಮೇಲೆ 2023ರಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ 166 ಮಂದಿಗೆ ಫೈಸಲಾಬಾದ್ ಭಯೋತ್ಪಾದನೆ ತಡೆ ನ್ಯಾಯಾಲಯವು (ಎಟಿಸಿ) ಗುರುವಾರ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಒತ್ತಾಯಿಸಿ ಪಾಕಿಸ್ತಾನ್ ತೆಹರೀಕ್ ಇ–ಇನ್ಸಾಫ್ (ಪಿಟಿಐ) ಪಕ್ಷವು ದೇಶದಾದ್ಯಂತ ಆಗಸ್ಟ್ 5ರಿಂದ 'ಫ್ರೀ ಇಮ್ರಾನ್ ಖಾನ್ ಅಭಿಯಾನ' ಆರಂಭಿಸಲು ಸಜ್ಜಾಗಿದೆ. ಇದೇ ಹೊತ್ತಿನಲ್ಲಿ, ಪಿಟಿಐ ಸದಸ್ಯರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ನ್ಯಾಷನಲ್ ಅಸೆಂಬ್ಲಿ ಮತ್ತು ಸೆನೆಟ್ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವವರು, ಹಲವು ಶಾಸಕರೂ ಶಿಕ್ಷೆಗೆ ಗುರಿಯಾಗಿದ್ದಾರೆ.

ನ್ಯಾಯಾಲಯದ ತೀರ್ಪನ್ನು ಪಿಟಿಐ ತೀವ್ರವಾಗಿ ಖಂಡಿಸಿದೆ. ತಮ್ಮ ಪಕ್ಷದ ನಾಯಕರನ್ನು ಸಂಸತ್ತಿನಲ್ಲಿ ಅನರ್ಹಗೊಳಿಸಲು ಹಾಗೂ ಶಾಂತಿಯುತವಾಗಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ತಡೆಯಲು ನಡೆಸುತ್ತಿರುವ ಭಾಗವಾಗಿ ಈ ತೀರ್ಪು ನೀಡಲಾಗಿದೆ ಎಂದು ಆರೋಪಿಸಿದೆ.

ಖಾನ್ ಅವರ ಪಕ್ಷದ ಕಾರ್ಯಕರ್ತರು, ಜಿನ್ನಾ ಹೌಸ್ (ಲಾಹೋರ್ನಲ್ಲಿರುವ ಕಮಾಂಡರ್ ನಿವಾಸ), ಮೇನ್ವಾಲಿ ವಾಯುನೆಲೆ ಸೇರಿದಂತೆ ಸೇನೆಯ ಹಲವು ಮೂಲಸೌಕರ್ಯಗಳು ಹಾಗೂ ಫೈಸಲಾಬಾದ್ನಲ್ಲಿ ಐಎಸ್ಐ ಕಚೇರಿ ಮೇಲೆ 2023ರ ಮೇ 9ರಂದು ದಾಳಿ ನಡೆಸಿ, ಹಾನಿ ಮಾಡಿದ್ದರು. ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೂ ದಾಳಿ ನಡೆಸಲಾಗಿತ್ತು.

ಐಎಸ್ಐ ಕಚೇರಿ ಮೇಲಿನ ದಾಳಿಯ ಆರೋಪ ಎದುರಿಸುತ್ತಿದ್ದ 185 ಜನರ ಪೈಕಿ 108 ಮಂದಿ ದೋಷಿ ಎಂದು ಘೋಷಿಸಿರುವ ನ್ಯಾಯಾಲಯ, ಉಳಿದ 77 ಮಂದಿಯನ್ನು ಖುಲಾಸೆಗೊಳಿಸಿದೆ. ಹಾಗೆಯೇ, ಫೈಸಲಾಬಾದ್ ಪೊಲೀಸ್ ಠಾಣೆ ಮೇಲಿನ ದಾಳಿಗೆ ಸಂಬಂಧಿಸಿದಂತೆ 58 ಮಂದಿಗೆ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.