ಪನ್ನೊಮ್ ಪೆನ್ಹಾ (ಕಾಂಬೋಡಿಯಾ): ಇಲ್ಲಿನ ಪಶ್ಚಿಮ ಕಾಂಬೋಡಿಯಾದ ವನ್ಯಜೀವಿ ಅಭಯಾರಣ್ಯದಲ್ಲಿ ವನ್ಯಜೀವಿ ಸಂಶೋಧಕರ ತಂಡವು ಅತ್ಯಂತ ಅಪರೂಪದ ‘ಸಿಯಾಮಿಸ್’ ಪ್ರಬೇಧದ ಮೊಸಳೆಗಳ 106 ಮೊಟ್ಟೆಗಳನ್ನು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕಳೆದ 20 ವರ್ಷಗಳಲ್ಲಿಯೇ ಅತೀ ದೊಡ್ಡದಾದ ಆವಿಷ್ಕಾರವಾಗಿದ್ದು, ವಿಶ್ವದ ಅಪರೂಪದ ಮೊಸಳೆ ಪ್ರಬೇಧಗಳ ಸಂರಕ್ಷಣೆಯ ವಿಚಾರದಲ್ಲಿ ಹೊಸ ಆಶಾಭಾವ ಸೃಷ್ಟಿಸಿದೆ.

ಕಳೆದ ಮೇ ತಿಂಗಳಲ್ಲಿ ‘ಕಾರ್ಡಮಂಮ್ ರಾಷ್ಟ್ರೀಯ ಉದ್ಯಾನದಲ್ಲಿ ಸಂಶೋಧಕರು ಇದನ್ನು ಪತ್ತೆಹಚ್ಚಿದ್ದಾರೆ. ಜೂನ್ 27ರಿಂದ 30ರ ನಡುವೆ 60 ಮೊಟ್ಟೆ ಒಡೆದು ಮರಿಗಳು ಹೊರಬಂದಿದೆ ಎಂದು ಇಲ್ಲಿನ ಕೃಷಿ, ಪರಿಸರ ಸಂರಕ್ಷಣೆ ಹಾಗೂ ಸಂಶೋಧಕರ ತಂಡವು ಬಿಡುಗಡೆಗೊಳಿಸಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

ಮೊಟ್ಟೆ ಪತ್ತೆಯಾದ ಜಾಗವು ಅವುಗಳ ಆವಾಸಸ್ಥಾನವಾಗಿದ್ದು, ಅವುಗಳ ಚೇತರಿಕೆಗೆ ಹೊಸ ಭರವಸೆ ಮೂಡಿಸಿದೆ. ಈ ಜಾಗವು ಕಾರ್ಡಮಂಮ್ ಉದ್ಯಾನದ ರಕ್ಷಣಾ ರೇಂಜರ್‌ಗಳ ನಿಗಾದಲ್ಲಿದೆ ಎಂದು ತಿಳಿಸಿದೆ.

ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಮೊಸಳೆಗಳು ಸಾಕಷ್ಟು ಪ್ರಮಾಣದಲ್ಲಿತ್ತು., 1990ರ ನಂತರ ಅವ್ಯಾಹತ ಬೇಟೆಯಿಂದ ಅಪಾಯದ ಸ್ಥಿತಿಗೆ ತಲುಪಿದವು. ಈಗ ಸಂಪೂರ್ಣವಾಗಿ ನಶಿಸುವ ಹಂತದಲ್ಲಿದೆ ಎಂದು ‘ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್’ ಕಳವಳ ವ್ಯಕ್ತಪಡಿಸಿದೆ.

ಜಗತ್ತಿನಲ್ಲಿ 1 ಸಾವಿರ ‘ಸಿಯಾಮಿಸ್’ ಮೊಸಳೆಗಳು ಉಳಿದಿದ್ದು, ಈ ಪೈಕಿ 300 ಮೊಸಳೆಗಳು ಕಾಂಬೋಡಿಯಾದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.