ವಾಷಿಂಗ್ಟನ್: ವಿದೇಶಗಳ ವಿದ್ಯಾರ್ಥಿಗಳು ತರಗತಿಗಳಿಗೆ ಖುದ್ದಾಗಿ ಹಾಜರಾಗುವ ಅಗತ್ಯ ಇಲ್ಲದಿದ್ದಲ್ಲಿ, ಅಮೆರಿಕ ತೊರೆಯಬೇಕು ಎಂದು ನೀಡಿದ್ದ ಆದೇಶವನ್ನು ಹಿಂಪಡೆಯುವಂತೆ ಅಮೆರಿಕದ ಸಂಸದರುಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ 30 ಮಂದಿ ಸೆನೆಟರ್ (ಸೆನೆಟ್ ಸದಸ್ಯರು), 136 ಸಂಸದರು (ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನ ಸದಸ್ಯರು) ಆಂತರಿಕ ಭದ್ರತಾ ಇಲಾಖೆಯ ಹಂಗಾಮಿ ಕಾರ್ಯದರ್ಶಿ ಚಾಡ್ ವೋಲ್ಫ್, ವಲಸೆ ಮತ್ತು ಸುಂಕ ಜಾರಿ ಇಲಾಖೆಯ ಹಂಗಾಮಿ ಕಾರ್ಯದರ್ಶಿ ಮ್ಯಾಥ್ಯೂ ಅಲ್ಬೆನ್ಸ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.

ವಿದ್ಯಾರ್ಥಿಗಳ ವಿನಿಮಯ ಮತ್ತು ಸಂದರ್ಶಕರ ಕಾರ್ಯಕ್ರಮದಲ್ಲಿ (ಎಸ್‌ಇವಿಪಿ) ಕೆಲವು ಬದಲಾವಣೆಗಳನ್ನು ಮಾಡಿರುವುದಕ್ಕೆ ಸಂಸದರು ಈ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಲಸಿಗರಲ್ಲದ ವಿದ್ಯಾರ್ಥಿಗಳು ಒಂದು ವೇಳೆ ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಲ್ಲಿ, ಇಲ್ಲವೇ ಆನ್‌ಲೈನ್ ಕೋರ್ಸ್‌ಗಳನ್ನೇ ಕಲಿಯುತ್ತಿದ್ದಲ್ಲಿ ಅವರು ಅಮೆರಿಕದಲ್ಲಿ ಇರುವಂತಿಲ್ಲ ಎಂದುವಿದೇಶಿ ವಿದ್ಯಾರ್ಥಿಗಳ ಶಿಕ್ಷಣ ನಿಯಮಗಳನ್ನು ಬದಲಾಯಿಸಲಾಗಿದೆ.

ಸೆನೆಟರ್‌ಗಳಾದ ರಾಬರ್ಟ್ ಮೆನೆಂಡೇಜ್, ಕಾರಿ ಬೂಕರ್, ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಈ ಪತ್ರಕ್ಕೆ ಸಹಿ ಹಾಕಿರುವ ಪ್ರಮುಖ ಸಂಸದರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.