ವಾಷಿಂಗ್ಟನ್ : ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯ ನಾಯಕರಾಗಿದ್ದ ಜಾನ್ ಲೆವಿಸ್ ನಿಧನರಾಗಿ 14 ಗಂಟೆಗಳ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂತಾಪ ಸೂಚಿಸಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ.

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಜತೆ ಕೆಲಸ ಮಾಡಿದ್ದ ಜಾನ್ ಲೆವಿಸ್ (80) ಅವರು ಶನಿವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಲೆವಿಸ್ ನಿಧನರಾಗಿ 14 ಗಂಟೆಗಳ ಬಳಿಕ ಟ್ವೀಟ್ ಮಾಡಿರುವ ಟ್ರಂಪ್ ‘ನಾಗರಿಕ ಹಕ್ಕುಗಳ ನಾಯಕ ಜಾನ್ ಲೂಯಿಸ್ ನಿಧನದ ಸುದ್ದಿ ಕೇಳಿ ದುಃಖವಾಯಿತು. ಮೆಲಾನಿಯಾ ಮತ್ತು ನಾನು ಅವರಿಗೆ ಸಂತಾಪ ಸೂಚಿಸುತ್ತೇವೆ, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಅಮೆರಿಕದಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ಜನಾಂಗೀಯ ದ್ವೇಷದ ಕಿಚ್ಚು ಬೂದಿ ಮುಚ್ಚಿದ ಕೆಂಡದಂತಿದ್ದು ಟ್ರಂಪ್ ತಡವಾಗಿ ಸಂತಾಪ ಸೂಚಿಸಿರುವುದಕ್ಕೂ ಅಮೆರಿಕದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.