ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೌಂಟ್‌ ಎವರೆಸ್ಟ್‌ ಶಿಖರ ಏರಿದ ಭಾರತದ 16 ವರ್ಷದ ಬಾಲಕಿ ಕಾಮ್ಯಾ

Published 23 ಮೇ 2024, 11:25 IST
Last Updated 23 ಮೇ 2024, 11:25 IST
ಅಕ್ಷರ ಗಾತ್ರ

ಜಮ್ಶೆಡ್‌ಪುರ: ಕಾಮ್ಯಾ ಕಾರ್ತಿಕೇಯನ್‌ ಎನ್ನುವ 16 ವರ್ಷದ ಬಾಲಕಿ ನೇಪಾಳ ಭಾಗದಿಂದ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ, ಈ ಸಾಧನೆ ಮಾಡಿದ ಅತಿ ಕಿರಿಯ ಭಾರತೀಯ ಎನಿಸಿಕೊಂಡಿದ್ದಾರೆ ಎಂದು ಟಾಟಾ ಸ್ಟೀಲ್‌ ಅಡ್ವೆಂಚರ್‌ ಫೌಂಡೇಶನ್‌ ಗುರುವಾರ ಹೇಳಿದೆ.

ಮಹಾರಾಷ್ಟ್ರ ಮೂಲದ ಕಾಮ್ಯಾ, ತಮ್ಮ ತಂದೆ ಭಾರತೀಯ ನೌಕಾಪಡೆಯ ಕಮಾಂಡರ್‌ ಎಸ್‌. ಕಾರ್ತಿಕೇಯನ್‌ ಅವರ ಜೊತೆಗೂಡಿ ಶಿಖರವನ್ನು ಏರಿದ್ದಾರೆ. ತಂದೆ, ಮಗಳ ಜೋಡಿ ಮೇ 20 ರಂದು 8,848 ಮೀ. ಎತ್ತರಕ್ಕೆ ತಲುಪಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಚಿಕ್ಕ ವಯಸ್ಸಿನಲ್ಲಿ ಮೌಂಟ್‌ ಎವರೆಸ್ಟ್‌ ಏರಿದ ಕಾಮ್ಯಾ ಅವರ ಸಾಧನೆಯನ್ನು ಶ್ಲಾಘಿಸುತ್ತೇವೆ. ಅವರ ಪ್ರಯಾಣವು ಪರಿಶ್ರಮ, ನಿಖರವಾದ ಸಿದ್ಧತೆ ಮತ್ತು ಅಚಲ ನಿರ್ಣಯದ ಮನೋಭಾವಕ್ಕೆ ಸಾಕ್ಷಿಯಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಚಾಣಕ್ಯ ಚೌಧರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮ್ಯ ಅವರು 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಶಕ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT