ಜಕಾರ್ತಾ: ‘ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ಸರಕು ಸಾಗಣೆ ಹಡಗು ಮತ್ತು ಮೀನುಗಾರಿಕೆ ದೋಣಿಯ ನಡುವೆ ಡಿಕ್ಕಿ ಸಂಭವಿಸಿದ್ದು,17 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

‘ಇಂದ್ರಮಾಯು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಇಂಡೊನೇಷ್ಯಾದ ಎಂವಿ ಹ್ಯಾಬ್ಕೊ ಪಯೋನೀರ್ ಸರಕು ಸಾಗಣೆ ಹಡಗಿಗೆ ಮೀನುಗಾರಿಕೆ ದೋಣಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ದೋಣಿಯು ನೀರಿನಲ್ಲಿ ಮುಳುಗಿದೆ. ಈ ದೋಣಿಯಲ್ಲಿ 32 ಮಂದಿ ಇದ್ದರು’ ಎಂದುಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡೆಡೇನ್ ರಿದ್ವಾನ್ಶು ತಿಳಿಸಿದರು.

‘ದೋಣಿಯಲ್ಲಿ ಸಿಲುಕಿದ್ದ 15 ಜನರನ್ನುರಕ್ಷಿಸುವಲ್ಲಿ ಸ್ದಳೀಯ ಮೀನುಗಾರರು ಮತ್ತು ನೌಕಾಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇತರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಸಮುದ್ರ ಸಾರಿಗೆ ನಿರ್ದೇಶನಾಲಯದ ವಕ್ತಾರ ವಿಷ್ಣುವರ್ಧನ ಅವರು ಮಾಹಿತಿ ನೀಡಿದರು.

‘ಬೊರ್ನಿಯೊ ದ್ವೀಪದಿಂದ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಸರಕು ಸಾಗಣೆ ಹಡಗು, ಮೀನುಗಾರರ ಬಲೆಗೆ ಸಿಲುಕಿತ್ತು. ಇದರಿಂದ ಹೊರ ಬರಲು ಪ್ರಯತ್ನಿಸುವಾಗ ಈ ಅಪಘಾತ ಸಂಭವಿಸಿದೆ’ ಎಂದು ರಿದ್ವಾನ್ಶು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.