ವಿಶ್ವಸಂಸ್ಥೆ: ಕಳೆದ ದಶಕದಲ್ಲಿ ಗರಿಷ್ಠ ತಾಪಮಾನ ದಾಖಲಾದ ಮೂರು ವರ್ಷಗಳ ಪೈಕಿ 2020ನೇ ವರ್ಷವೂ ಒಂದು. ಹವಾಮಾನದಲ್ಲಿನ ಈ ಬದಲಾವಣೆ ಮಾನವ ನಿರ್ಮಿತ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ ಹೇಳಿದೆ.

ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) 2011–2020ರ ಅವಧಿಯಲ್ಲಿ ದಾಖಲಿಸಿದ ಹವಾಮಾನಕ್ಕೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಹಿಂದಿನ ದಶಕಗಳಿಗೆ ಹೋಲಿಸಿದರೆ 2011–2020 ಅವಧಿಯ ವರ್ಷಗಳಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದಿದೆ.

‘2015ರ ನಂತರದ ವರ್ಷಗಳಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ. ಈ ಪೈಕಿ 2016, 2019 ಹಾಗೂ 2020 ಗರಿಷ್ಠ ತಾಪಮಾನ ದಾಖಲಾದ ವರ್ಷಗಳಾಗಿವೆ. ಈ ಮೂರು ವರ್ಷಗಳಲ್ಲಿನ ತಾಪಮಾನಕ್ಕೂ, ಜಾಗತಿಕ ತಾಪಮಾನಕ್ಕೂ ಹೆಚ್ಚು ವ್ಯತ್ಯಾಸ ಇರಲಿಲ್ಲ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹೇಳಿದ್ದಾರೆ.

‘ಹವಾಮಾನದಲ್ಲಿನ ಈ ಬದಲಾವಣೆ ಜನರ ಬದುಕಿನ ಮೇಲೆ ಪರಿಣಾಮ ಬೀರುವುದು. ಈ ಶತಮಾನದಲ್ಲಿ ಜಾಗತಿಕ ತಾಪಮಾನದಲ್ಲಿ 3–5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳ ಕಂಡುಬಂದರೆ ಅಚ್ಚರಿಯಿಲ್ಲ. ಇದೇ ಗತಿಯಲ್ಲಿ ತಾಪಮಾನ ಹೆಚ್ಚುತ್ತಾ ಹೋದರೆ ಮುಂದೊಂದು ದಿನ ಭಾರಿ ದುರಂತ ತಪ್ಪಿದ್ದಲ್ಲ’ ಎಂದೂ ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.