ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: 32 ಭಾರತೀಯ ಮೀನುಗಾರರ ಬಂಧನ

Published 21 ಮಾರ್ಚ್ 2024, 15:24 IST
Last Updated 21 ಮಾರ್ಚ್ 2024, 15:24 IST
ಅಕ್ಷರ ಗಾತ್ರ

ಕೊಲಂಬೊ: ತಲೈಮನ್ನಾರ್‌ ಕರಾವಳಿ ಮತ್ತು ಡೆಲ್ಫ್ ದ್ವೀಪದ ಬಳಿ ದ್ವೀಪ ರಾಷ್ಟ್ರದ ಸಮುದ್ರ ಗಡಿಯ ಒಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಡಿ 32 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬುಧವಾರ ಬಂಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

‘ತಲೈಮನ್ನಾರ್‌ನಿಂದ ಭಾರತದ ಇಬ್ಬರು ಪ್ರವಾಸಿಗರು ಮತ್ತು 7 ಜನ ಮೀನುಗಾರರನ್ನು ಹಾಗೂ ಡೆಲ್ಫ್ ದ್ವೀಪದಿಂದ ಭಾರತದ ಮೂರಕ್ಕೂ ಹೆಚ್ಚು ಪ್ರವಾಸಿಗರು ಮತ್ತು 25 ಮೀನುಗಾರರನ್ನು ನೌಕಾಪಡೆ ಬಂಧಿಸಿದೆ’ ಎಂದು ತಿಳಿಸಿದೆ.

‘ಮುಂದಿನ ಕಾನೂನು ಕ್ರಮಕ್ಕಾಗಿ ಬಂಧಿತರನ್ನು ಮನ್ನಾರ್‌ ಮತ್ತು ಮೈಲಾಡಿಯ ಮೀನುಗಾರಿಕಾ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದೆ.

‘ಈ ವರ್ಷ ಇದಕ್ಕೂ ಮೊದಲು ಭಾರತದ 23 ಪ್ರವಾಸಿಗರನ್ನು ಮತ್ತು 178 ಮೀನುಗಾರರನ್ನು ಬಂಧಿಸಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT