ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುವಾಂಡ | ಭಾರಿ ಮಳೆಗೆ ಭೂಕುಸಿತ; ಕನಿಷ್ಠ 135 ಸಾವು, 20 ಸಾವಿರ ಮಂದಿ ಸ್ಥಳಾಂತರ

Published 14 ಮೇ 2023, 5:56 IST
Last Updated 14 ಮೇ 2023, 5:56 IST
ಅಕ್ಷರ ಗಾತ್ರ

ಕಿಗಾಲಿ: ಇತ್ತೀಚೆಗೆ ರುವಾಂಡ ದೇಶದಲ್ಲಿ ಮಳೆಯಿಂದ ಸಂಭವಿಸಿದ ಭೂಕುಸಿತಗಳಲ್ಲಿ ಕನಿಷ್ಠ 135 ಮಂದಿ ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಅಪಾಯದ ವಲಯದಲ್ಲಿದ್ದ 20 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಇಲ್ಲಿನ ಸರ್ಕಾರ ತಿಳಿಸಿದೆ.

ಮೇ ಮೊದಲ ವಾರದಂದು ಇಲ್ಲಿನ ಉತ್ತರ ಮತ್ತು ದಕ್ಷಿಣ ಪ್ರಾಂತ್ಯಗಳಲ್ಲಿ ಅಪಾರ ಪ್ರಮಾಣದ ಮಳೆಯಾಗಿದೆ. ಪರಿಣಾಮ ಪ್ರವಾಹ ಹಾಗೂ ಭೂ ಕುಸಿತ ಉಂಟಾಗಿದೆ.

‘ಈ ವಿಪತ್ತಿನಿಂದ ಸುಮಾರು 110 ಜನರು ಗಾಯಗೊಂಡಿದ್ದಾರೆ. 13 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಂತ್ಯಗಳ ವಿವಿಧ ಪ್ರದೇಶಗಳಲ್ಲಿ 5,963 ಮನೆಗಳು ಧ್ವಂಸಗೊಂಡ ಪರಿಣಾಮ 20,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಳಿಸಿಲಾದೆ’ ಎಂದು ತುರ್ತು ನಿರ್ವಹಣಾ ಇಲಾಖೆ ಹೇಳಿದೆ.

‘20 ರಾಷ್ಟ್ರೀಯ ರಸ್ತೆಗಳು, 12 ವಿದ್ಯುತ್ ಕೇಂದ್ರಗಳು ಹಾಗೂ ಎಂಟು ನೀರು ಸಂಸ್ಕರಣಾ ಘಟಕಗಳು ಕೂಡ ನಾಶವಾಗಿವೆ ಎಂದು ಇಲಾಖೆ ತಿಳಿಸಿದೆ‘ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಧಿಕ ಮಳೆಯಿಂದ ಹಾನಿಗೊಳಗಾದ ರುಬಾವು ಜಿಲ್ಲೆಯ ಪ್ರದೇಶಗಳಿಗೆ ಭೇಟಿ ನೀಡಿದ ಅಧ್ಯಕ್ಷ ಪಾಲ್ ಕಗಾಮೆ ಅವರು ಸಂತ್ರಸ್ತರಿಗೆ ನೆರವು ನೀಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT