ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡೋನೇಷ್ಯಾದಲ್ಲಿ 5.4 ತೀವ್ರತೆಯ ಭೂಕಂಪ: 4 ಮಂದಿ ಸಾವು

Last Updated 9 ಫೆಬ್ರುವರಿ 2023, 10:07 IST
ಅಕ್ಷರ ಗಾತ್ರ

ಜಕಾರ್ತ: ಇಂಡೋನೇಷ್ಯಾದ ಪಾಪುವಾ ಪ್ರಾಂತ್ಯದಲ್ಲಿ ಗುರುವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವಾರು ಕಟ್ಟಡಗಳು ನಾಶವಾಗಿವೆ ಎಂದು ವಿಪತ್ತು ಏಜೆನ್ಸಿ ಅಧಿಕಾರಿ ತಿಳಿಸಿದ್ದಾರೆ.

‘ಈಗ ನಾವು ಭೂಕಂಪದ ಅಪಾಯದ ಮೌಲ್ಯಮಾಪನವನ್ನು ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಹವಾಮಾನ ಮತ್ತು ಜಿಯೋಫಿಸಿಕ್ಸ್ ಏಜೆನ್ಸಿ ಪ್ರಕಾರ, ಮಧ್ಯಾಹ್ನ 1.28ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಾಜಧಾನಿ ಜಯಪುರದ ನೈಋತ್ಯಕ್ಕೆ 1 ಕಿಮೀ ದೂರ ಹಾಗೂ 10 ಕಿಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಸುನಾಮಿಗೆ ಪ್ರಚೋದಿಸುವಷ್ಟು ಭೂಕಂಪದ ತೀವ್ರತೆ ಇಲ್ಲ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT