ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಢಾಕಾ: ದುಷ್ಕರ್ಮಿಗಳಿಂದ ರೈಲಿಗೆ ಬೆಂಕಿ, 4 ಸಾವು

ಮೊಹಂಗಣಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
Published 19 ಡಿಸೆಂಬರ್ 2023, 11:44 IST
Last Updated 19 ಡಿಸೆಂಬರ್ 2023, 11:44 IST
ಅಕ್ಷರ ಗಾತ್ರ

ಢಾಕಾ: ಪ್ರಯಾಣಿಕರ ರೈಲಿಗೆ ಮಂಗಳವಾರ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಮಹಿಳೆ, ಆಕೆಯ ಪುತ್ರ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಜನವರಿ 7ರ ಚುನಾವಣೆಗೆ ಸಂಬಂಧಿಸಿ ರಾಜಕೀಯ ಅನಿಶ್ಚಿತತೆ ಮುಂದುವರಿದಿರುವಂತೆಯೇ ಈ ಅವಘಡ ಸಂಭವಿಸಿದೆ.

ಚುನಾವಣೆಯನ್ನು ಬಹಿಷ್ಕರಿಸಿರುವ ಬಾಂಗ್ಲಾದ ಪ್ರಮುಖ ವಿರೋಧಪಕ್ಷ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಮಂಗಳವಾರ ದೇಶವ್ಯಾಪಿ ಬಂದ್‌ಗೆ ಕರೆ ನೀಡಿತ್ತು. ಈ ಅವಧಿಯಲ್ಲಿಯೇ ರೈಲಿಗೆ ಬೆಂಕಿ ಹಚ್ಚಿರುವ ಕೃತ್ಯವೂ ನಡೆದಿದೆ.

ದುಷ್ಕರ್ಮಿಗಳು ಢಾಕಾ ಮೂಲದ ಮೊಹಂಗಣಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ್ದರು.  ನಾಲ್ವರು ಮೃತಪಟ್ಟಿದ್ದಾರೆ ಎಂದು ತೆಜ್‌ಗಾಂವ್ ಠಾಣೆಯ ಅಧಿಕಾರಿ ತಿಳಿಸಿದರು.

ಕಳೆದ ಒಂದು ತಿಂಗಳಲ್ಲಿ ರೈಲಿಗೆ ಬೆಂಕಿ ಹಚ್ಚಿರುವ ಐದನೇ ಕೃತ್ಯ ಇದಾಗಿದೆ. ಸಾವಿನ ಸಂಖ್ಯೆ ದೃಷ್ಟಿಯಿಂದ ಗಂಭೀರವಾದುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT