ಬೊಗೊಟಾ:‘ಕೊಲಂಬಿಯಾದಲ್ಲಿ ಎರಡು ವಾರಗಳ ಹಿಂದೆ ಆರಂಭವಾದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ 42 ಮಂದಿ ಮೃತಪಟ್ಟಿದ್ದಾರೆ’ ಎಂದು ಅಲ್ಲಿನ ಮಾನವ ಹಕ್ಕುಗಳ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

‘ಕೋವಿಡ್ ಪಿಡುಗಿನಿಂದಾಗಿ ಹೆಚ್ಚಿದ ಬಡತನ ಮತ್ತು ಅಸಮಾನತೆಯನ್ನು ವಿರೋಧಿಸಿ ಬುಧವಾರವೂ ಪ್ರತಿಭಟನೆ ಮುಂದುವರಿದಿದೆ. ಇದರಲ್ಲಿ ಈವರೆಗೆ 168 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಸರ್ಕಾರಿ ಸಂಸ್ಥೆಯೊಂದು ಹೇಳಿದೆ.

‘ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಹಿಂಸಾಚಾರದಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯೂ ಸಾವಿಗೀಡಾಗಿದ್ದಾರೆ’ ಎಂದು ಟೆಂಬ್ಲೋರ್ಸ್ ಸಂಸ್ಥೆಯು ಹೇಳಿದೆ.

ಸಾಮಾಜಿಕ ಮತ್ತು ಆರೋಗ್ಯ ಸೇವೆಗಳಿಗಾಗಿ ಹಣವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಸರ್ಕಾರವು ತೆರಿಗೆಯನ್ನು ಹೆಚ್ಚು ಮಾಡಿತ್ತು. ಇದನ್ನು ವಿರೋಧಿಸಿಏಪ್ರಿಲ್ 28ರಂದು ಪ್ರತಿಭಟನೆ ಆರಂಭವಾಯಿತು. ಈ ಪ್ರತಿಭಟನೆ ಹತ್ತಿಕ್ಕಲು ಕೊಲಂಬಿಯಾದ ಪೊಲೀಸರು ಬಲಪ‍್ರಯೋಗ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೇ 2ರಂದು ಸರ್ಕಾರವು ತನ್ನ 6.2 ಶತಕೋಟಿ ಡಾಲರ್ ತೆರಿಗೆ ಯೋಜನೆಯನ್ನು ವಾಪಾಸು ಪಡೆಯಿತು. ಅಲ್ಲದೆ ಹಣಕಾಸು ಸಚಿವರು ರಾಜೀನಾಮೆಯನ್ನು ಕೂಡ ಕೊಟ್ಟರು. ಆದರೂ ಕೊಲಂಬಿಯಾದ ಹಲವೆಡೆ ಪ್ರತಿಭಟನೆಗಳು ಮುಂದುವರಿದಿದೆ. ದೇಶದ 1 ಕೋಟಿ ಜನರಿಗೆ ಮೂಲ ಆದಾಯ ಯೋಜನೆ ಜಾರಿಗೆ ತರಬೇಕು, ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಯುತ್ತಿದೆ.

ಕೊಲಂಬಿಯಾದಲ್ಲಿ ಕೋವಿಡ್‌ನಿಂದ 78 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.