ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಟ್ರಿಮೊನಿ ವೆಬ್‌ಸೈಟ್‌ ಮೂಲಕ ವಂಚನೆ: ಭಾರತೀಯ ಮೂಲದ ಮಹಿಳೆಗೆ ಶಿಕ್ಷೆ

Last Updated 14 ಜೂನ್ 2022, 12:54 IST
ಅಕ್ಷರ ಗಾತ್ರ

ಸಿಂಗಪುರ : ‌ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ 51 ವರ್ಷದ ಮಹಿಳೆಗೆ ಸಿಂಗಪುರ ನ್ಯಾಯಾಲಯ 7 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ.

ಮಲಿಹಾ ರಾಮು ಎಂಬವವರು ತಮಿಳ್‌ ಮ್ಯಾಟ್ರಿಮೊನಿ ವೆಬ್‌ಸೈಟಿನಲ್ಲಿ ಕೀರ್ತನಾ ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದರು. ಅದರಲ್ಲಿತಾವು 25 ವರ್ಷದ ಅವಿವಾಹಿತ ಮಹಿಳೆ ಎಂದು ಬರೆದುಕೊಂಡು, ಪ್ರೊಫೈಲ್‌ನಲ್ಲಿ ಸಂಬಂಧಿಕರ ಫೋಟೊ ಹಾಕಿದ್ದರು.

2018ರಲ್ಲಿ ಭಾರತೀಯ ಮೂಲದ ಸಂತ್ರಸ್ತ ವ್ಯಕ್ತಿಯ ತಂದೆ ಗೋವಿಂದನ್‌ ಧನಸೇಕರನ್‌ ಮುರಳಿಕೃಷ್ಣ ಅವರುಪ್ರೊಫೈಲ್‌ ನೋಡಿ ತಮ್ಮ ಮಗನಿಗೆ ಸಂಗಾತಿ ಹುಡುಕುವ ಉದ್ದೇಶದಿಂದ ಸಂಪರ್ಕಿಸಿದ್ದರು.

ಮಲಿಹಾ ಸಂಬಂಧಿಯ ಫೋಟೋಗಳನ್ನು ಕಳುಹಿಸಿ, ಆಸ್ಟ್ರೇಲಿಯಾದಲ್ಲಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ವಿಡಿಯೋ ಕಾಲ್‌ಗಳಿಂದ ತಪ್ಪಿಸಿಕೊಳ್ಳುತ್ತಿದ್ದರು. ಬಳಿಕ ತಾಯಿಯ ಮೃತಪಟ್ಟಿದ್ದರೂ, ಅವರ ಅನಾರೋಗ್ಯ ನೆಪ ಹೇಳಿ ತಂದೆ ಮತ್ತು ಮಗನಿಂದ ಸುಮಾರು 5,750 ಸಿಂಗಪುರ ಡಾಲರ್‌ (2.80 ಲಕ್ಷಕ್ಕೂ ಹೆಚ್ಚು) ಪಡೆದು ವಂಚಿಸಿದ್ದರು. ಪ್ರಕರಣ ಸಂಬಂಧ ನ್ಯಾಯಾಲಯ 7 ತಿಂಗಳ ಕಾರಾಗೃಹ ಶಿಕ್ಷಿ ವಿಧಿಸಿದೆ.

ಈ ಹಿಂದೆ 2006 ಮತ್ತು 2007ರಲ್ಲೂ ಇಂಥದ್ದೇ ಪ್ರಕರಣದಲ್ಲಿ ಮಲಿಹಾ ರಾಮು ಅವರಿಗೆ ಶಿಕ್ಷೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT