ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರು ಶ್ವೇತಭನದ ವಿವಿಧ ಹುದ್ದೆಗಳಿಗೆ ಶೇಕಡ 61ರಷ್ಟು ಮಹಿಳೆಯರನ್ನು ನೇಮಿಸಿದ್ದಾರೆ.

ಜತೆಗೆ, ಒಟ್ಟು ನೇಮಕಾತಿಯಲ್ಲಿ ಶೇಕಡ 54ರಷ್ಟು ಮಂದಿ ಕಪ್ಪು ವರ್ಣೀಯರು ಇದ್ದಾರೆ ಎಂದು ಬೈಡನ್ ಅವರ ತಂಡ ತಿಳಿಸಿದೆ.

ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ನೇತೃತ್ವದ ಆಡಳಿತವು ವೈವಿಧ್ಯತೆಯ ಸಿದ್ಧಾಂತ ಮತ್ತು ಹಿನ್ನೆಲೆಯನ್ನು ಒಳಗೊಳ್ಳಲಿದೆ. ದೇಶವು ಎದುರಿಸುತ್ತಿರುವ ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿಭಾವಂತರಿಗೂ ಪ್ರೋತ್ಸಾಹ ನೀಡಲಾಗುವುದು ಎಂದು ಈ ತಂಡ ತಿಳಿಸಿದೆ.

ಆಡಳಿತಕ್ಕೆ ಹೊಸ ಸ್ಪರ್ಶ ನೀಡಲು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಮತ್ತು ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರು ಬುಧವಾರ 100 ಸದಸ್ಯರನ್ನು ವಿವಿಧ ಹುದ್ದೆಗಳಿಗೆ ನೇಮಿಸಿದ್ದಾರೆ. ಇವರಲ್ಲಿ ತೃತೀಯ ಲಿಂಗಿಗಳು ಸಹ ಶೇಕಡ 11ರಷ್ಟು ಇದ್ದಾರೆ.

ಅತ್ಯುತ್ತಮ ಕೌಶಲ ಹೊಂದಿರುವ ಈ ಪ್ರತಿಭಾವಂತರು ಎಲ್ಲ ತೊಡಕುಗಳನ್ನು ನಿವಾರಿಸಿ ಅಮೆರಿಕದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಈ ನೇಮಕಾತಿ ಪಡೆದವರಲ್ಲಿ ಶೇಕಡ 40ರಷ್ಟು ಹಿರಿಯರಿಗೆ ಮಕ್ಕಳಿದ್ದಾರೆ ಎಂದು ಬೈಡನ್ ತಂಡ ತಿಳಿಸಿದೆ.

‘ಅಮೆರಿಕದ ವೈವಿಧ್ಯತೆಯನ್ನು ಬಿಂಬಿಸುವ ತಂಡ ಆಡಳಿತದಲ್ಲಿರಬೇಕು ಎಂದು ನಾನು ಮತ್ತು ಕಮಲಾ ಹ್ಯಾರಿಸ್ ಆರಂಭದಲ್ಲೇ ನಿರ್ಧರಿಸಿದ್ದೇವು. ವೈವಿಧ್ಯಮಯ ತಂಡಗಳಿದ್ದರೆ ಉತ್ತಮ ಪ್ರಗತಿ ಸಾಧಿಸಬಹುದು. ಜತೆಗೆ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು’ ಎಂದು ಬೈಡನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.