ಇಸ್ಲಾಮಾಬಾದ್/ಪೆಶಾವರ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನದ ಭದ್ರತಾ ಪಡೆಯೊಂದಿಗಿನ ಘರ್ಷಣೆಯಲ್ಲಿ ಇಬ್ಬರು ಪ್ರಮುಖ ಕಮಾಂಡರ್ ಸೇರಿದಂತೆ ಅಫ್ಗಾನಿಸ್ತಾನ ತಾಲಿಬಾನ್‌ನ ಎಂಟು ಸೈನಿಕರು ಮೃತಪಟ್ಟಿದ್ದಾರೆ.
ಕುರ್ರಂ ಗಡಿ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ತಾಲಿಬಾನ್ ಸೈನಿಕರಲ್ಲಿ ಸುಮಾರು 16 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ಬೆಳಿಗ್ಗೆ ಅಫ್ಗನ್–ಪಾಕ್ ಗಡಿಯಲ್ಲಿರುವ ಪಾಲೋಸಿನ್ ಪ್ರದೇಶದ ಪಾಕಿಸ್ತಾನ ಚೆಕ್‌ಪೋಸ್ಟ್ ಮೇಲೆ ತಾಲಿಬಾನ್ ಭಾರಿ ಪ್ರಮಾಣದ ಶಸ್ತ್ರಸ್ತ್ರಾಗಳೊಂದಿಗೆ ದಾಳಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಡಾನ್ ಪತ್ರಿಕೆ’ ವರದಿ ಮಾಡಿದೆ.