ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್ ದಾಳಿಯಿಂದ ಗಾಜಾದ ಶೇ 80ರಷ್ಟು ಜನರು ವಲಸೆ: ವಿಶ್ವಸಂಸ್ಥೆ

ಇಸ್ರೇಲ್ ದಾಳಿಯಿಂದ 19 ಲಕ್ಷ ಜನ ಸಂಕಷ್ಟಕ್ಕೆ
Published 3 ಜುಲೈ 2024, 13:57 IST
Last Updated 3 ಜುಲೈ 2024, 13:57 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ, ಅಮೆರಿಕ: ಗಾಜಾದ ಶೇ 80ರಷ್ಟು ಜನರನ್ನು (ಸುಮಾರು 19 ಲಕ್ಷ) ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆಯ ಸಮನ್ವಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಗಾಜಾದ ರಫಾ ಮತ್ತು ಖಾನ್ ಯೂನಿಸ್ ಭಾಗಗಳಲ್ಲಿ ಸುಮಾರು 24 ಲಕ್ಷ ಜನರು ವಾಸವಾಗಿದ್ದಾರೆ. ಇದೀಗ ಖಾನ್ ಯೂನಿಸ್ ನಗರದ ಜನರೂ ಬೇರೆಡೆ ಸ್ಥಳಾಂತರಗೊಳ್ಳಬೇಕು ಎಂಬ ಇಸ್ರೇಲ್ ಸೇನಾಪಡೆಯ ಆದೇಶದಿಂದ ಸುಮಾರು 2.5 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 

ಗಾಜಾದಲ್ಲಿರುವ ಪ್ಯಾಲೆಸ್ಟೀನ್ ನಾಗರಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಮನೆಗಳನ್ನು ಕೆಡವಲಾಗಿದ್ದು, ಅವರ ಜೀವನ ಬುಡಮೇಲಾಗಿದೆ ಎಂದು ಗಾಜಾದಲ್ಲಿರುವ ವಿಶ್ವಸಂಸ್ಥೆಯ ಸಮನ್ವಯ ಅಧಿಕಾರಿ ಸಿಗ್ರಿಡ್ ಕಾಗ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮಾಹಿತಿ ನೀಡಿದ್ದಾರೆ. 

10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಮತ್ತೆ ಸ್ಥಳಾಂತರಿಸಿದ್ದು, ಗಾಜಾದ ಒಟ್ಟಾರೆ 19 ಲಕ್ಷ ಜನರಿಗೆ ವಸತಿ ಮತ್ತು ಸುರಕ್ಷತೆ ಒದಗಿಸಬೇಕಿದೆ. ಯುದ್ಧವು ಮಾನವೀಯ ಬಿಕ್ಕಟ್ಟಿನ ಜೊತೆಗೆ, ದಾರಿದ್ರ್ಯವನ್ನೂ ಸೃಷ್ಟಿಸಿದೆ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT