ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರ ಮಹಿಳೆ ಸೋಫಿಯಾ ರಚಿಸಿದ ಡಿಜಿಟಲ್ ಕಲಾಕೃತಿ ಸುಮಾರು ₹ 5 ಕೋಟಿಗೆ ಮಾರಾಟ

Last Updated 25 ಮಾರ್ಚ್ 2021, 6:33 IST
ಅಕ್ಷರ ಗಾತ್ರ

ಹಾಂಗ್ ಕಾಂಗ್: ಯಂತ್ರ ಮಹಿಳೆ ಸೋಫಿಯಾ ರಚಿಸಿದ ಡಿಜಿಟಲ್ ಕಲಾಕೃತಿಯನ್ನು ಗುರುವಾರ ಹರಾಜಿನಲ್ಲಿ ಸುಮಾರು ₹ 5 ಕೋಟಿ (6.8 ಲಕ್ಷ ಡಾಲರ್)ಗೆ ನಾನ್ ಫಂಗಬಲ್ ಟೋಕನ್ (ಎನ್‌ಎಫ್‌ಟಿ) ರೂಪದಲ್ಲಿ ಮಾರಾಟ ಮಾಡಲಾಯಿತು.

ಬ್ಲಾಕ್‌ಚೈನ್ ಲೆಡ್ಜರ್‌ಗಳಲ್ಲಿ ಉಳಿಸಲಾದ ಡಿಜಿಟಲ್ ಸಿಗ್ನೇಚರ್ ಎನ್‌ಎಫ್‌ಟಿಗಳು, ಯಾವುದೇ ಐಟಂನ ಮಾಲೀಕತ್ವ ಮತ್ತು ದೃಢೀಕರಣವನ್ನು ಯಾರು ಬೇಕಾದರೂ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಎನ್‌ಎಫ್‌ಟಿಯು ಹೂಡಿಕೆಯ ಕ್ರೇಜ್ ಆಗಿ ಮಾರ್ಪಟ್ಟಿದೆ. ಇದೇ ವೇದಿಕೆಯಲ್ಲಿ ಈ ತಿಂಗಳಲ್ಲಿ ಒಂದು ಕಲಾಕೃತಿ ಸುಮಾರು 70 ದಶಲಕ್ಷ ಡಾಲರ್(₹ 508 ಕೋಟಿ)ಗೆ ಮಾರಾಟವಾಗಿದೆ.

2016 ರಲ್ಲಿ ಅನಾವರಣಗೊಂಡ ಯಂತ್ರ ಮಹಿಳೆ ಸೋಫಿಯಾ, ಟೆಸ್ಲಾದಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಕಲಾಕೃತಿ ಸೇರಿ ಪ್ರಸಿದ್ಧ ವ್ಯಕ್ತಿಗಳನ್ನು ಚಿತ್ರಿಸಿದ ವರ್ಣರಂಜಿತ ಭಾವಚಿತ್ರಗಳಿಗೆ ಹೆಸರುವಾಸಿಯಾದ 31 ವರ್ಷದ ಇಟಾಲಿಯನ್ ಡಿಜಿಟಲ್ ಕಲಾವಿದೆ ಆಂಡ್ರಿಯಾ ಬೊನಾಸೆಟೊ ಅವರ ಸಹಯೋಗದೊಂದಿಗೆ ತನ್ನ ಕಲಾಕೃತಿಯನ್ನು ರಚಿಸಿದ್ದಾಳೆ.

ಬೊನಾಸೆಟೊ ಅವರ ಕಲಾಸೇವೆ, ಕಲೆಯ ಇತಿಹಾಸ ಮತ್ತು ತನ್ನದೇ ಆದ ಸೋಫಿಯಾ ಅವರ ತನ್ನದೇ ಭೌತಿಕ ರೇಖಾಚಿತ್ರಗಳು ಇವೆ ಎಂದು ಅವಳ ಸೃಷ್ಟಿಕರ್ತ ಡೇವಿಡ್ ಹ್ಯಾನ್ಸನ್ ಹೇಳುತ್ತಾರೆ.

ಈ ಡಿಜಿಟಲ್ ಕಲಾಕೃತಿಗೆ 'ಸೋಫಿಯಾ ಇನ್‌ಸ್ಟಾಂಟಿಯೇಶನ್' ಎಂಬ ಶೀರ್ಷಿಕೆ ನೀಡಲಾಗಿದ್ದು, 12 ಸೆಕೆಂಡುಗಳ ಎಂಪಿ 4 ಫೈಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT