ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ | ಪಟಾಕಿ ಗೋದಾಮಿನಲ್ಲಿ ಸ್ಫೋಟ: 9 ಸಾವು

Published 29 ಜುಲೈ 2023, 15:39 IST
Last Updated 29 ಜುಲೈ 2023, 15:39 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ದಕ್ಷಿಣ ಥಾಯ್ಲೆಂಡ್‌ನ ನರಾಥಿವಾಸ್ ಪ್ರಾಂತ್ಯದ ಪಟಾಕಿ ಗೋದಾಮಿನಲ್ಲಿ ಶನಿವಾರ  ಸ್ಫೋಟ ಸಂಭವಿಸಿ ಕನಿಷ್ಠ 9 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ 115 ಜನ ಗಾಯಗೊಂಡಿದ್ದಾರೆ. ಸುಮಾರು 500 ರಿಂದ 800 ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ನರಾಥಿವಾಸ್ ಪ್ರಾಂತ್ಯದ ಗವರ್ನರ್ ಸನನ್ ಪೊಂಗಕ್ಸೋರ್ನ್ ಹೇಳಿರುವುದಾಗಿ ಥಾಯ್ ಪಿಬಿಎಸ್‌ ವಾಹಿನಿ ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೊ ಹರಿದಾಡುತ್ತಿದ್ದು, ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅನೇಕ ಕಟ್ಟಡಗಳು, ವಾಹನ ಹಾಗೂ ರಸ್ತೆಗಳು ಹಾನಿಯಾಗಿರುವುದು. ಗೋದಾಮು ಸುತ್ತಮುತ್ತಲಿನ ನೂರಾರು ಮನೆಗಳಿಗೆ ಹಾನಿಯಾಗಿರುವುದು ಕಂಡು ಬಂದಿದೆ. 

ಪಟಾಕಿ ಗೋದಾಮಿನಲ್ಲಿ ವೆಲ್ಡಿಂಗ್ ಕಾಮಗಾರಿ ನಡೆಯುತ್ತಿದ್ದು, ಅದರ ಕಿಡಿ ಪಟಾಕಿಗೆ ತಾಕಿ ಸ್ಫೋಟ ಸಂಭವಿಸಿರಬಹುದು ಎಂದು ಗವರ್ನರ್‌ ಸನನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT