ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷದ ಹಿಂದೆ ಅಪಹರಣವಾಗಿದ್ದ ಬಾಲಕಿ ರಕ್ಷಣೆ

Published 18 ಏಪ್ರಿಲ್ 2024, 15:36 IST
Last Updated 18 ಏಪ್ರಿಲ್ 2024, 15:36 IST
ಅಕ್ಷರ ಗಾತ್ರ

ಅಬುಜಾ: ಈಶಾನ್ಯ ನೈಜೀರಿಯಾದಲ್ಲಿ 10 ವರ್ಷಗಳ ಹಿಂದೆ ಉಗ್ರಗಾಮಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಬಾಲಕಿಯನ್ನು ಅವರ ಮೂವರು ಮಕ್ಕಳೊಂದಿಗೆ ರಕ್ಷಿಸಲಾಗಿದೆ ಎಂದು ನೈಜೀರಿಯಾದ ಸೇನೆ ಗುರುವಾರ ತಿಳಿಸಿದೆ.

ಐದು ತಿಂಗಳ ಗರ್ಭಿಣಿಯೂ ಆಗಿರುವ ಲಿಡಿಯಾ ಸೈಮನ್‌ ಅವರನ್ನು ಸೈನಿಕರು, ಬೋರ್ನೊ ರಾಜ್ಯದ ಗ್ವೋಜಾ ಕೌನ್ಸಿಲ್‌ ಪ್ರದೇಶದಲ್ಲಿ ರಕ್ಷಿಸಿದ್ದಾರೆ. ಇದು 15 ವರ್ಷಗಳಿಂದ ಇಸ್ಲಾಮಿಕ್‌ ಉಗ್ರರ ಪೀಡಿತ ಪ್ರದೇಶವಾಗಿದೆ ಎಂದು ಸೇನೆ ಹೇಳಿದೆ. 

2014ರ ಏಪ್ರಿಲ್‌ನಲ್ಲಿ ಉಗ್ರರು ಚಿಬೊಕ್‌ ಹಳ್ಳಿಯ ಶಾಲೆಯಿಂದ 276 ಬಾಲಕಿಯನ್ನು ಅಪರಹರಿಸಿದ್ದರು. ಅವರಲ್ಲಿ ಸೈಮನ್‌ ಕೂಡ ಒಬ್ಬರು. ಈ ಪೈಕಿ ಇನ್ನೂ 82 ಮಂದಿ ಉಗ್ರರ ಸೆರೆಯಲ್ಲಿದ್ದಾರೆ.

ಸೈಮನ್‌ ತನ್ನ 2ರಿಂದ 4 ವರ್ಷದ ಮಕ್ಕಳ ಜತೆಗಿರುವ ಚಿತ್ರವನ್ನು ಸೇನೆ ಬಿಡುಗಡೆ ಮಾಡಿದೆ. ಆದರೆ ಅವರಿನ್ನೂ ತಮ್ಮ ಕುಟುಂಬವನ್ನು ಸೇರಿಲ್ಲ. ಸೈಮನ್‌ ಅವರನ್ನು ಹೇಗೆ ರಕ್ಷಿಸಲಾಯಿತು ಎಂಬುದರ ಬಗ್ಗೆ ಸೇನೆ ಮಾಹಿತಿ ಹಂಚಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT