ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತವಾಗಿಳಿದ ‘ಸೊಯುಜ್ ಎಂಎಸ್‌–24’ ಅಂತರಿಕ್ಷ ನೌಕೆ

Published 6 ಏಪ್ರಿಲ್ 2024, 14:55 IST
Last Updated 6 ಏಪ್ರಿಲ್ 2024, 14:55 IST
ಅಕ್ಷರ ಗಾತ್ರ

ಮಾಸ್ಕೊ: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಯಶಸ್ವಿ ಭೇಟಿ ಬಳಿಕ ಭೂಮಿಗೆ ವಾಪಾಸಾಗುತ್ತಿದ್ದ, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರಿದ್ದ ರಷ್ಯಾದ ‘ಸೊಯುಜ್‌’ ಅಂತರಿಕ್ಷ ನೌಕೆ ಕುಜಕಿಸ್ತಾನದ ನಿರ್ಜನ ಪ‍್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಸೊಯುಜ್‌ ಎಂಎಸ್‌–24 ಹೆಸರಿನ ಈ ಅಂತರಿಕ್ಷ ನೌಕೆಯಲ್ಲಿ ರಷ್ಯಾದ ಒಲೆಗ್ ನೊವಿಟ್ಸ್ಕೈ, ನಾಸಾದ ಲೊರಲ್ ಒಹರ ಮತ್ತು ಬೆಲಾರಸ್‌ನ ಮರಿನಾ ವಸಿಲೆವ್‌ಸ್ಕಾಯ ಇದ್ದರು. ಈ ಅಂತರಿಕ್ಷ ನೌಕೆಯು ಕಜಕಿಸ್ತಾನದ ಸ್ಥಳೀಯ ಕಾಲಮಾನ ಮಧ್ಯಾಹ್ನ 12.17 ಗಂಟೆಗೆ ಜೆಜ್‌ಕಾಜ್ಗನ್ ಪಟ್ಟಣದ ನಿರ್ಜನ ಪ್ರದೇಶದಲ್ಲಿ ಬಂದಿಳಿಯಿತು ಎಂದು ‘ನಾಸಾ’ ತಿಳಿಸಿದೆ.

ಈ ಪೈಕಿ ಒಹರ ಅವರು ಸೆಪ್ಟೆಂಬರ್ 15, 2023ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದು, ಅಲ್ಲಿ 204 ದಿನ ಕಾಲ ವ್ಯಯಿಸಿದ್ದರು. ಉಳಿದ ಇಬ್ಬರು ಈ ವರ್ಷದ ಮಾರ್ಚ್‌ 23ರಂದು ತೆರಳಿದ್ದರು ಎಂದೂ ನಾಸಾ ವಿವರಿಸಿದೆ.

ರಷ್ಯಾದ ಒಲೆಗ್ ನೊವಿಟ್ಸ್ಕೈ, ಬೆಲರೂಸ್‌ನ ಮರಿನಾ ವಸಿಲೆವ್‌ಸ್ಕಾಯ, ನಾಸಾದ ಗಗನಯಾತ್ರಿ ಟ್ರೇಸಿ ಡೈಸನ್‌ ಅವರಿದ್ದ ‘ಸೊಯುಜ್‌’ ಅಂತರಿಕ್ಷ ನೌಕೆಯನ್ನು ಮಾ.23ರಂದು ಕಳುಹಿಸಲಾಗಿತ್ತು. 21ರಂದೇ ಕಳುಹಿಸಲು ನಿಗದಿಯಾಗಿದ್ದರೂ ನೌಕೆಯ ವಿದ್ಯುತ್‌ ಪೂರೈಕೆ ವ್ಯವಸ್ಥೆಯಲ್ಲಿ ದೋಷದಿಂದಾಗಿ ಎರಡು ದಿನ ವಿಳಂಬವಾಗಿತ್ತು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೊಸ್‌ಕಾಸ್ಮೊಸ್‌ನ ಮುಖ್ಯಸ್ಥ ಯೂರಿ ಬೊರಿಸೊವ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT