ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡೋನೇಷ್ಯಾ | ಮಗುಚಿ ಬಿದ್ದ ರೋಹಿಂಗ್ಯಾ ಸಮುದಾಯದವರಿದ್ದ ಬೋಟ್‌

Published 20 ಮಾರ್ಚ್ 2024, 11:36 IST
Last Updated 20 ಮಾರ್ಚ್ 2024, 11:36 IST
ಅಕ್ಷರ ಗಾತ್ರ

ಬಂದ ಆಚೆ (ಇಂಡೋನೇಷ್ಯಾ): ಹತ್ತಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಂ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮರದ ಬೋಟ್‌ ಇಲ್ಲಿನ ಕೌಲಾ ಬುಬೋನ್‌ ಬೀಚ್‌ನಲ್ಲಿ ಬುಧವಾರ ಮಗುಚಿ ಬಿದ್ದಿದೆ.

ಸ್ಥಳೀಯ ಮೀನುಗಾರರು ಆರು ನಿರಾಶ್ರಿತರನ್ನು ರಕ್ಷಿಸಿದ್ದಾರೆ. ಘಟನೆಯಿಂದಾದ ಸಾವು–ನೋವಿನ ಬಗ್ಗೆ ಈವರೆಗೆ ಯಾವುದೇ ವರದಿಯಾಗಿಲ್ಲ.

ಮ್ಯಾನ್ಮಾರ್‌ ಸೇನಾಪಡೆಯ ದಮನಕಾರಿ ನೀತಿಯಿಂದ ಕಂಗೆಟ್ಟ ರೋಹಿಂಗ್ಯಾ ಸಮುದಾಯದ ಸುಮಾರು 7,40,000 ಮಂದಿ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿದ್ದಾರೆ. ತುಂಬಿತುಳುಕುತ್ತಿರುವ ಶಿಬಿರಗಳಲ್ಲಿ ನೆಲೆಸಲು ಸಾಧ್ಯವಾಗದೆ ಸಾವಿರಾರು ನಿರಾಶ್ರಿತರು ಇಂಡೋನೇಷ್ಯಾ ಸೇರಿದಂತೆ ನೆರೆಯ ದೇಶಗಳಿಗೆ ನುಸುಳಲು ಯತ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT