ದುಬೈ: ಸಂಯುಕ್ತ ಅರಬ್ ಎಮಿರೇಟ್ಸ್‌ನ ರಾಜಧಾನಿಯಾಗಿರುವ ಅಬುಧಾಬಿಗೆ ತೆರಳಬೇಕಿದ್ದರೆ ಇನ್ನು ಮುಂದೆ ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ಹಾಕಿಸಿರುವುದು ಕಡ್ಡಾಯವಾಗಿದೆ.

ಪಕ್ಕದ ದುಬೈ ನಗರದಲ್ಲಿ ಈ ನಿಯಮ ಇಲ್ಲ. ಆದರೆ ಅಬುಧಾಬಿಯಲ್ಲಿ ಇದನ್ನು ಕಡ್ಡಾಯಗೊಳಿಸಿದ್ದು, ಎರಡು ಲಸಿಕೆಯ ಜತೆಗೆ ಎರಡನೇ ಲಸಿಕೆ ಪಡೆದ ಆರು ತಿಂಗಳ ಬಳಿಕ ಬೂಸ್ಟರ್ ಡೋಸ್ ಲಸಿಕೆ ಪಡೆದವರಿಗಷ್ಟೇ ಇನ್ನು ಮುಂದೆ ನಗರದೊಳಗಿನ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರದ ಆರೋಗ್ಯ ಆ್ಯಪ್‌ನಲ್ಲಿ ಮಾಹಿತಿ ನೀಡಲಾಗಿದೆ.

ಅಬುಧಾಬಿಗೆ ಪ್ರವೇಶಿಸುವುದಕ್ಕೆ ಮೊದಲಾಗಿ ಎರಡು ವಾರಗಳೊಳಗೆ ಮಾಡಿಸಿದ ಕೋವಿಡ್ ನೆಗೆಟಿವ್ ವರದಿ ಅಗತ್ಯವಾಗಿದೆ. ಇಂತಹ ನೆಗೆಟಿವ್ ವರದಿ ಇದ್ದರೆ ಮಾತ್ರ ‘ಗ್ರೀನ್ ಕಾರ್ಡ್‘ ಸ್ಥಾನಮಾನ ಉಳಿದಿರುತ್ತದೆ.

ಯುಎಇಯ ಶೇ 90ಕ್ಕಿಂತ ಅಧಿಕ ಜನಸಂಖ್ಯೆಗೆ ಲಸಿಕೆ ಹಾಕಿಸುವ ಮೂಲಕ ಎಲ್ಲ ಅರ್ಹರಿಗೂ ಶೇ 100ರಷ್ಟು ಲಸಿಕೆ ಹಾಕಿಸಿದ ಸಾಧನೆ ಮಾಡಲಾಗಿದೆ. ದೇಶದಲ್ಲಿ ಈಚಿನ ದಿನಗಳಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬೂಸ್ಟರ್ ಡೋಸ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.