ಪ್ಯಾರಿಸ್: ಅಫ್ಗಾನಿಸ್ತಾನದಲ್ಲಿ ಈಗ ಉಳಿದಿರುವ ಪತ್ರಕರ್ತೆಯ ಸಂಖ್ಯೆ 100ಕ್ಕೂ ಕಡಿಮೆ. ಈ ಹಿಂದೆ 700ಕ್ಕೂ ಹೆಚ್ಚು ಪತ್ರಕರ್ತೆಯರು ಇಲ್ಲಿ ಇದ್ದರು ಎಂದು ಮಾಧ್ಯಮ ಕಾವಲು ಸಮಿತಿಯೊಂದು ಬುಧವಾರ ಹೇಳಿದೆ.

ಮಹಿಳಾ ಪತ್ರಕರ್ತರು ಮನೆಯಲ್ಲಿಯೇ ಇರಬೇಕು, ವರದಿ ಮಾಡಲು ತೆರಳುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಹಲ್ಲೆ ಮಾಡುವುದಾಗಿ ತಾಲಿಬಾನ್ ಪಡೆಗಳು ಎಚ್ಚರಿಸಿವೆ ಎಂದು ರಿಪೋಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ (ಆರ್‌ಎಸ್‌ಎಫ್) ವರದಿ ತಿಳಿಸಿದೆ. ಕಾಬೂಲ್‌ನಲ್ಲಿ 108 ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿರುವುದಾಗಿ ಕಳೆದ ವರ್ಷ ಲೆಕ್ಕ ಹಾಕಲಾಗಿದೆ. ಇದರಲ್ಲಿ ಕೆಲಸ ಮಾಡುತ್ತಿರುವ 4,940 ಜನರಲ್ಲಿ 1,080 ಜನ ಮಹಿಳೆಯರು, ಈ ಪೈಕಿ 700 ಮಂದಿ ಪತ್ರಕರ್ತೆಯರಿದ್ದರು ಎಂದು ಆರ್‌ಎಸ್‌ಎಫ್ ಹೇಳಿದೆ.

‘2020ರಲ್ಲಿ ದೇಶದ 8 ಅತಿದೊಡ್ಡ ಮಾಧ್ಯಮ ಸಮೂಹಗಳಿಂದ ನೇಮಕಗೊಂಡ 510 ಮಹಿಳೆಯರಲ್ಲಿ ಈಗ 39 ಪತ್ರಕರ್ತರೂ ಸೇರಿದಂತೆ 76 ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ’ ಎಂದು ಕಾವಲು ಸಮಿತಿ ಹೇಳಿದೆ.

‘ಈ ಅಂಕಿ ಅಂಶಗಳು ಅಫ್ಗನ್ ರಾಜಧಾನಿಯಲ್ಲಿ ಪತ್ರಕರ್ತೆಯರು ಕಣ್ಮರೆಯಾಗಿರುವುದನ್ನು ತೋರುತ್ತದೆ’ ಎಂದು ಆರ್‌ಎಸ್‌ಎಫ್ ಉಲ್ಲೇಖಿಸಿದೆ.

ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸಲಾಗುವುದು ಮತ್ತು ಮಹಿಳಾ ಪತ್ರಕರ್ತರಿಗೆ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ತಾಲಿಬಾನ್ ಭರವಸೆ ನೀಡಿದೆ. ಅದರೆ ಇಲ್ಲಿ ಮಹಿಳಾ ಪತ್ರಕರ್ತರಿಲ್ಲದ ಹೊಸ ಮಾಧ್ಯಮ ಅಸ್ತಿತ್ವಕ್ಕೆ ಬರಲಿದೆ ಎಂದು ಕಾವಲು ಸಮಿತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.