ಬೀಜಿಂಗ್: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಸಂಯಮದಿಂದ ವರ್ತಿಸಿ, ಮಾತುಕತೆಯ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳುವಂತೆ ಉಭಯ ದೇಶಗಳಿಗೆ ಚೀನಾ ಸೋಮವಾರ ಒತ್ತಾಯಿಸಿದೆ. ಎರಡೂ ದೇಶಗಳ ನಡುವಿನ ಗಡಿಗಳಲ್ಲಿ ನಡೆದ ತೀವ್ರ ಘರ್ಷಣೆಯಲ್ಲಿ ಎರಡೂ ಕಡೆಯ ಡಜನ್ಗಟ್ಟಲೆ ಸೈನಿಕರು ಮೃತಪಟ್ಟಿದ್ದಾರೆ.

ಇತ್ತೀಚೆಗಿನ ಘರ್ಷಣೆಗಳ ನಂತರ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ನಡುವಿನ ಸಂಬಂಧಗಳು ಹದಗೆಟ್ಟಿರುವ ಬಗ್ಗೆ ನಮಗೆ ತೀವ್ರ ಕಳವಳವಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

‘ಎರಡೂ ದೇಶಗಳು ಶಾಂತವಾಗಿ ಮತ್ತು ಸಂಯಮದಿಂದ ವರ್ತಿಸಿ, ವಿವಾದಗಳನ್ನು ಮಾತುಕತೆಗಳು ಮತ್ತು ಸಂವಾದದಿಂದ ಬಗೆಹರಿಸಿಕೊಂಡು, ಘರ್ಷಣೆಯನ್ನು ತಪ್ಪಿಸಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲಿ ಎಂದು ಚೀನಾ ಪ್ರಾಮಾಣಿಕವಾಗಿ ಬಯಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ–ಅಫ್ಗಾನಿಸ್ತಾನ ಗಡಿಯಲ್ಲಿ ರಾತ್ರಿಯಿಡೀ ನಡೆದ ತೀವ್ರ ಘರ್ಷಣೆಯಲ್ಲಿ ಕನಿಷ್ಠ 23 ಸೈನಿಕರು ಮತ್ತು 200ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಭಾನುವಾರ ತಿಳಿಸಿದೆ. ದಾಳಿಯಲ್ಲಿ 58 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದು, ಸುಮಾರು 30 ಜನರು ಗಾಯಗೊಂಡಿದ್ದಾರೆ ಎಂದು ಅಫ್ಗನ್ನ ತಾಲಿಬಾನ್ ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.