ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಎಚ್.ಡಬ್ಲ್ಯು.ಬುಷ್‌ ನಿಧನ

Last Updated 1 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಅಮೆರಿಕದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್‌ ಎಚ್. ಡಬ್ಲ್ಯು. ಬುಷ್‌ (94) ಶುಕ್ರವಾರ ನಿಧನರಾದರು. ಅವರು ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿದ್ದರು.

1924ರ ಜೂನ್‌ 12ರಂದು ಮಸಾಚುಸೆಟ್ಸ್‌ನ ಮಿಲ್ಟನ್‌ನಲ್ಲಿ ಜನಿಸಿದ ಬುಷ್‌ ಅವರದು ಶ್ರೀಮಂತ ಕುಟುಂಬ. ತಮ್ಮ 18ನೇ ವಯಸ್ಸಿಗೆ ಯುದ್ಧ ವಿಮಾನದ ಪೈಲಟ್‌ ಆಗಿದ್ದ ಬುಷ್‌, ಜಪಾನ್‌ ಪರ್ಲ್‌ ಹಾರ್ಬರ್‌ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸೇನೆಯಲ್ಲಿದ್ದರು. ನಂತರದಲ್ಲಿ ಒಟ್ಟು 58 ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಬುಷ್‌, ಈ ಸಾಹಸಕ್ಕಾಗಿ ಪ್ರಶಸ್ತಿಯನ್ನೂ ಪಡೆದಿದ್ದರು. ಹೀಗಾಗಿ, ಅವರನ್ನು ಎರಡನೇ ಮಹಾಯುದ್ಧದ ಹೀರೊ ಎಂದೂ ಬಣ್ಣಿಸಲಾಗುತ್ತಿತ್ತು.

1989ರಿಂದ 1993ರವರೆಗೆ ಅಮೆರಿಕದ ಅಧ್ಯಕ್ಷರಾಗಿ ಸೀನಿಯರ್‌ ಬುಷ್‌ ಕಾರ್ಯನಿರ್ವಹಿಸಿದ್ದರು. ಸೋವಿಯತ್‌ ಒಕ್ಕೂಟದ ಪತನ, ಶೀತಲ ಸಮರದ ಅಂತ್ಯ, ಬರ್ಲಿನ್‌ ಮಹಾಗೋಡೆ ಪತನ, ನ್ಯಾಟೊದೊಳಗೆ ಜರ್ಮನಿ ಸೇರ್ಪಡೆಯಂತಹ ಹಲವು ಪ್ರಮುಖ ಘಟನೆಗಳಿಗೆ ಅವರ ಆಡಳಿತ ಸಾಕ್ಷಿಯಾಯಿತು.

ಇರಾಕ್‌ನ ಸರ್ವಾಧಿಕಾರಿ ಸದ್ದಾಂ ಹುಸೇನ್‌ ಪಕ್ಕದ ಕುವೈತ್‌ ಮೇಲೆ ದಾಳಿ ಮಾಡಿದಾಗ, ಆ ದೇಶದ ಬೆಂಬಲಕ್ಕೆ ನಿಂತ ಬುಷ್‌, 32 ರಾಷ್ಟ್ರಗಳ ಮೈತ್ರಿಪಡೆಗಳ ಜೊತೆ ಸೇರಿ ಇರಾಕ್‌ ಮೇಲೆ ದಾಳಿ ಮಾಡಿದ್ದರು. ಕುವೈತ್‌ನ ಸಾರ್ವಭೌಮತೆಯನ್ನು ರಕ್ಷಿಸುವ ಮೂಲಕ ಅಂತರರಾಷ್ಟ್ರೀಯ ಕಾನೂನನ್ನು ಎತ್ತಿ ಹಿಡಿದಿದ್ದರು.ಅಮೆರಿಕದಿಂದ ಅಣುಬಾಂಬ್‌ ದಾಳಿ ನಡೆಯಲಿದೆ ಎಂಬ ಮಾತುಗಳ ನಡುವೆ, 1991 ಮತ್ತು 1993ರಲ್ಲಿ ಶಸ್ತ್ರಾಸ್ತ್ರ ಕಡಿತ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಂತಹ ದಾಳಿ ಸಾಧ್ಯತೆ ಇಲ್ಲ ಎಂಬುದಾಗಿ ದೃಢವಾಗಿ ಹೇಳಿದ್ದರು.

ಎಂಟು ತಿಂಗಳ ಹಿಂದೆ ಬುಷ್‌ ಪತ್ನಿ ಬಾರ್ಬರಾ (73) ನಿಧನರಾಗಿದ್ದರು. ಬುಷ್‌ ಅವರ ಪುತ್ರ, ಜಾರ್ಜ್‌ ಡಬ್ಲ್ಯು ಬುಷ್‌ ಜ್ಯೂನಿಯರ್‌ ಅಮೆರಿಕದ 43ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

1990ರ ನವೆಂಬರ್‌ 22ರಂದು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅಮೆರಿಕ ಮತ್ತು ಬ್ರಿಟನ್‌ ಪಡೆಗಳ ಜತೆ ಜಾರ್ಜ್‌ ಎಚ್‌.ಡಬ್ಲ್ಯೂ. ಬುಷ್‌. -ರಾಯಿಟರ್ಸ್‌ ಚಿತ್ರ
1990ರ ನವೆಂಬರ್‌ 22ರಂದು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅಮೆರಿಕ ಮತ್ತು ಬ್ರಿಟನ್‌ ಪಡೆಗಳ ಜತೆ ಜಾರ್ಜ್‌ ಎಚ್‌.ಡಬ್ಲ್ಯೂ. ಬುಷ್‌. -ರಾಯಿಟರ್ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT