ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಂಪ್‌ ಅವರನ್ನು ಸೋಲಿಸಲು ಜನ ನಿರ್ಧರಿಸಿದ್ದಾರೆ: ಕಮಲಾ ಹ್ಯಾರಿಸ್

Published : 30 ಆಗಸ್ಟ್ 2024, 15:04 IST
Last Updated : 30 ಆಗಸ್ಟ್ 2024, 15:04 IST
ಫಾಲೋ ಮಾಡಿ
Comments

ವಾಷಿಂಗ್ಟನ್‌: ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್‌ ಟ್ರಂಪ್‌ ದೇಶವನ್ನು ವಿಭಜಿಸುವ ಕಾರ್ಯಸೂಚಿ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಇದು ಅಮೆರಿಕ ಪ್ರಜೆಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ನಡೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಜನರು ಟ್ರಂಪ್‌ ಅವರನ್ನು ಪರಾಭವಗೊಳಿಸಲು ನಿರ್ಧರಿಸಿದ್ದಾರೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.

ಅಮೆರಿಕದ ಹಾಲಿ ಉಪಾಧ್ಯಕ್ಷೆಯೂ ಆಗಿರುವ 59 ವರ್ಷದ ಕಮಲಾ ಹ್ಯಾರಿಸ್‌, ಸಿಎನ್‌ಎನ್ ಸುದ್ದಿವಾಹಿನಿಗೆ ನೀಡಿರುವ ಮೊದಲ ಸಂದರ್ಶನದಲ್ಲಿ, ನವೆಂಬರ್‌ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಕುರಿತು ಮಾತನಾಡಿದ್ದಾರೆ.

‘ಟ್ರಂಪ್‌ ಅವರ ಕಾರ್ಯಸೂಚಿಯನ್ನು ಧಿಕ್ಕರಿಸಿ, ಹೊಸ ಆರಂಭಕ್ಕೆ ಅಮೆರಿಕ ಜನರು ಸಿದ್ಧರಾಗಿದ್ದಾರೆ’ ಎಂದು ಹೇಳಿದ್ದಾರೆ.

‘ನಿಮ್ಮ ಜನಾಂಗೀಯ ಅಸ್ಮಿತೆ ಕುರಿತು ಟ್ರಂಪ್‌ ಹೇಳಿಕೆಗೆ ಏನು ಹೇಳುತ್ತೀರಿ’ ಎಂಬ ಪ್ರಶ್ನೆಗೆ, ‘ಇದು ಅವರ ಚುನಾವಣಾ ಕಾರ್ಯತಂತ್ರ ಭಾಗ’ ಎಂದು ಪ್ರತಿಕ್ರಿಯಿಸಿದ ಅವರು, ‘ಮುಂದಿನ ಪ್ರಶ್ನೆ ಕೇಳಿ, ದಯವಿಟ್ಟು’ ಎಂದಿದ್ದಾರೆ.

‘ಮಧ್ಯಮ ವರ್ಗಕ್ಕೆ ಯಾವ ರೀತಿ ನೆರವು ನೀಡಲು ಸಾಧ್ಯ? ಅವರನ್ನು ಸಬಲರನ್ನಾಗಿ ಮಾಡುವುದು ಹೇಗೆ? ಎಂಬುದಕ್ಕೇ ನನ್ನ ಆದ್ಯತೆ. ಅಮೆರಿಕ ಜನರ ಆಶೋತ್ತರಗಳು, ಗುರಿಗಳು ಹಾಗೂ ಅವರ ಮಹತ್ವಾಕಾಂಕ್ಷೆಗಳನ್ನು ಗಮನಿಸಿದಾಗ, ಜನರು ಹೊಸ ಆರಂಭಕ್ಕೆ ನಿಶ್ಚಯಿಸಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT