ವಾಷಿಂಗ್ಟನ್(ಅಮೆರಿಕ): ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಡೆಮಾಕ್ರಟಿಕ್ ಜೊಹ್ರಾನ್ ಮಮ್ದಾನಿ ಅವರ ಹಳೆ ವಿಡಿಯೊವನ್ನು ಹಂಚಿಕೊಂಡಿರುವ ರಿಪಬ್ಲಿಕನ್ ಪಕ್ಷದ ಸದಸ್ಯ ಬ್ರಾಂಡನ್ ಗಿಲ್, ಮಮ್ದಾನಿ ಅವರು ಊಟ ಮಾಡುವ ಶೈಲಿಯನ್ನು ಟೀಕಿಸಿದ್ದಾರೆ.

‘ಅಮೆರಿಕದಲ್ಲಿರುವ ಸುಸಂಸ್ಕೃತರು ಹೀಗೆ ತಿನ್ನುವುದಿಲ್ಲ’ ಎಂದು ಹೇಳಿರುವ ಅವರು, ಬರಿಗೈಯಲ್ಲಿ ಆಹಾರ ಸೇವಿಸುವುದನ್ನು ‘ಅನಾಗರಿಕ’ ಎಂದು ಪ್ರತಿಪಾದಿಸಿದ್ದಾರೆ.

ಮುಂದುವರಿದು, ‘ನೀವು ಪಾಶ್ಚಿಮಾತ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನಿರಾಕರಿಸಿದರೆ, ಮೂರನೇ ಜಗತ್ತಿಗೆ ಹಿಂತಿರುಗಿ’ ಎಂದು ಹೇಳಿದ್ದಾರೆ.

ಗಿಲ್ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪಿಜ್ಜಾ, ಫ್ರೆಂಚ್ ಫ್ರೈಸ್ಗಳನ್ನು ಹೇಗೆ ತಿನ್ನುತ್ತೀರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ‘ಇನ್ನೊಬ್ಬರ ಆಹಾರ ಪದ್ಧತಿ, ಹವ್ಯಾಸವನ್ನು ಟೀಕಿಸುವುದೂ ಅನಾಗರಿಕವೇ’ ಎಂದು ಹೇಳಿದ್ದಾರೆ.

ಗಿಲ್ ಅವರ ಪತ್ನಿ, ಭಾರತದ ಮೂಲದ ಡೇನಿಯಲ್ ಡಿಸೋಜಾ ಮತ್ತು ಅವರ ತಂದೆ ದಿನೇಶ್ ಡಿಸೋಜಾ ಅವರು ಬರಿಗೈಯಲ್ಲಿ ಊಟ ಮಾಡುತ್ತಿರುವ ಹಳೆಯ ಫೋಟೊಗಳನ್ನು ಆಯ್ದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ನೆಟ್ಟಿಗರೊಬ್ಬರು, ‘ಹಲೋ ಅಮೆರಿಕದ ಸುಸಂಸ್ಕೃತ ವ್ಯಕ್ತಿಗಳೇ.. ಇಲ್ಲಿ ನೋಡಿ, ನಿಮ್ಮ ಮಾವ ಕೈಯಲ್ಲಿ ಊಟ ಮಾಡುತ್ತಿರುವುದನ್ನು’ ಎಂದಿದ್ದಾರೆ.

ಇತ್ತೀಚೆಗೆ ನಡೆದ ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕಾಗಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಮಮ್ದಾನಿ ಗೆಲುವು ಸಾಧಿಸಿದ್ದರು. ಇಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.

ಪತಿಯ ಹೇಳಿಕೆ ಸಮರ್ಥಿಸಿದ ಪತ್ನಿ ಡೇನಿಯಲ್

ಬರಿಗೈಯಲ್ಲಿ ಊಟ ಮಾಡುವುದನ್ನು ಟೀಕಿಸಿದ ಪತಿ ಗಿಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಡೇನಿಯಲ್ ಡಿಸೋಜಾ ಗಿಲ್ ಅವರು, ಅನ್ನವನ್ನು ನಾನು ಕೈಯಲ್ಲಿ ತಿನ್ನುತ್ತಿರಲಿಲ್ಲ, ಚಮಚ ಬಳಸುತ್ತಿದ್ದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.