ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ, ಸಿರಿಯಾದಲ್ಲಿ ಮತ್ತೊಂದು ಭೂಕಂಪ: ಮತ್ತೆ ಸಾವು – ನೋವು

Last Updated 21 ಫೆಬ್ರುವರಿ 2023, 2:49 IST
ಅಕ್ಷರ ಗಾತ್ರ

ಇಸ್ತಾಂಬುಲ್‌: 80 ವರ್ಷಗಳ ಅತ್ಯಂತ ಭೀಕರ ಭೂಕಂಪಕ್ಕೆ ತುತ್ತಾಗಿರುವ ದಕ್ಷಿಣ ಟರ್ಕಿ ಮತ್ತು ವಾಯುವ್ಯ ಸಿರಿಯಾ ಕೇವಲ ಎರಡು ವಾರಗಳ ಅಂತದಲ್ಲೇ ಮತ್ತೊಂದು ಭೂಕಂಪಕ್ಕೆ ಸಾಕ್ಷಿಯಾಗಿವೆ. ಸೋಮವಾರ ಅದೇ ಪ್ರದೇಶದಲ್ಲಿ ಮತ್ತೊಂದು ಪ್ರಬಲ ಭೂಕಂಪವಾಗಿದ್ದು, ಕಟ್ಟಡಗಳು ಕುಸಿದು ಜೀವ ಹಾನಿಯಾಗಿದೆ. ಈಗಾಗಲೇ ದುರಂತದಿಂದ ಕಂಗಾಲಾಗಿರುವ ಲಕ್ಷಾಂತರ ಜನರು ಮತ್ತೊಮ್ಮೆ ಆಘಾತಕ್ಕೆ ಒಳಗಾಗಿದ್ದಾರೆ.

ಟರ್ಕಿಯ ದಕ್ಷಿಣದ ಪ್ರಾಂತ್ಯ ಹಟೈ ಎಂಬಲ್ಲಿ ರಾತ್ರಿ 8:04ಕ್ಕೆ ಭೂಕಂಪವಾಗಿದೆ. ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರವು 6.4 ತೀವ್ರತೆಯನ್ನು ಸೂಚಿಸಿದ್ದರೆ, ಅಮೆರಿಕ ಭೂವಿಜ್ಞಾನ ಸಮೀಕ್ಷಾ ಸಂಸ್ಥೆಯು 6.3ರ ಭೂಕಂಪನವಾಗಿದೆ ಎಂದು ಹೇಳಿದೆ.

ಹೊಸ ಭೂಕಂಪದ ಪರಿಣಾಮವಾಗಿ ಕನಿಷ್ಠ ಮೂವರು ಮೃತಪಟ್ಟಿದ್ದರೆ 213 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ. ಹಲವರು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಸಿರಿಯಾದಲ್ಲಿ ಕನಿಷ್ಠ 150 ಮಂದಿ ಗಾಯಗೊಂಡಿದ್ದಾರೆ. ಆದರೆ ಸಾವು ಸಂಭವಿಸದ ಬಗ್ಗೆ ದೃಢವಾದ ಮಾಹಿತಿ ಲಭ್ಯವಾಗಿಲ್ಲ.

ಫೆಬ್ರುವರಿ 6ರ ಭೂಕಂಪನದಿಂದ ತೀವ್ರವಾಗಿ ಹಾನಿಗೀಡಾಗಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಈ ವರೆಗೆ ಕನಿಷ್ಠ 46,000 ಮಂದಿ ಜೀವ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT